ಕಲಬುರಗಿ: ಯಡ್ರಾಮಿ ತಾಲ್ಲೂಕಿನ ಕಾಖಂಡಕಿ ಗ್ರಾಮದ ಮಲ್ಲಾರಾಧ್ಯರ ಹಾಗೂ ಕೋರಿಸಿದ್ಧೇಶ್ವರ ಶಿವಯೋಗಿಗಳ ಭಕ್ತರು ಸುರಿಯುವ ಭಾರೀ ಮಳೆಯ ನಡುವೆಯೂ ರಥವನ್ನು ಎಳೆದರು.

ಜಾತ್ರೆಯ ಅಂಗವಾಗಿ ಬುಧವಾರ ಸಂಜೆ ನಡೆಯಬೇಕಿದ್ದ ರಥೋತ್ಸವನ್ನು ಮಳೆಯ ಕಾರಣ ಮುಂದೂಡಲಾಗಿತ್ತು. ಮಳೆ ನಿಲ್ಲುವ ಯಾವ ಲಕ್ಷಣವೂ ಕಾಣದಿದ್ದಾಗ ಭಕ್ತರು ನಾಲವಾರ ಹಾಗೂ ಕಾಖಂಡಕಿ ಮಠಗಳ ಪೀಠಾಧಿಪತಿ ಸಿದ್ಧತೋಟೇಂದ್ರ ಶಿವಾಚಾರ್ಯರ ಅಪ್ಪಣೆ ಪಡೆದರು.

ಸದ್ಗುರು ಮಲ್ಲಾರಾಧ್ಯರ ಹಾಗೂ ಕೋರಿಸಿದ್ಧೇಶ್ವರ ಶಿವಯೋಗಿಗಳ, ಸಿದ್ಧತೋಟೇಂದ್ರ ಶಿವಾಚಾರ್ಯರ ಜೈಕಾರ ಹಾಕುತ್ತಾ ಮಧ್ಯರಾತ್ರಿ ಸುರಿವ ಭಾರೀ ಮಳೆಯಲ್ಲಿಯೇ ರಥವನ್ನು ಎಳೆದರು. ನಡೆದಾಡಲು ಸಹ ಕಷ್ಟವಾಗಿರುವ ಕೆಸರು ಗದ್ದೆಯಂತಾದ ನೆಲದಲ್ಲಿ ತೇರನ್ನೆಳೆದು ಸಂಭ್ರಮಿಸಿದರು.

ಕಳೆದ ವರ್ಷ ಸಹ ಮಳೆಯಿಂದಾಗಿ ಕೆಸರು ಗದ್ದೆಯಂತಾದ ಜಮೀನಿನಲ್ಲಿ ಭಕ್ತರು ರಥವನ್ನು ಎಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.