ಶುಕ್ರವಾರ, ನವೆಂಬರ್ 22, 2019
27 °C

‘ಅಂಬೇಡ್ಕರ್ ಶ್ರೇಷ್ಠ ವಕೀಲರೂ ಹೌದು’

Published:
Updated:
Prajavani

ಕಲಬುರ್ಗಿ: ‘ಡಾ.ಅಂಬೇಡ್ಕರ್‌ ಎಂದರೆ ಶ್ರೇಷ್ಠ ಜ್ಞಾನಿ, ಚಿಂತಕ, ಸಂವಿಧಾನ ರಚನೆಯ ಮೂಲ ಕರ್ತೃ ಎಂದಷ್ಟೇ ಬಹಳಷ್ಟು ಮಂದಿ ಅರ್ಥ ಮಾಡಿಕೊಂಡಿದ್ದಾರೆ. ಅದರ ಆಚೆಗೂ ಅವರೊಬ್ಬ ನಿಪುಣ ವಕೀಲರಾಗಿದ್ದರು’ ಎಂದು ಸಾಹಿತಿ ವಿಠಲ ವಗ್ಗನ್‌ ಹೇಳಿದರು.

ಕರ್ನಾಟಕ ಸಮತಾ ಸೈನಿಕ ದಳದ ನಗರ ಘಟಕ ಹಾಗೂ ನಗರ ಮಹಿಳಾ ಘಟಕದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ 63ನೇ ಧಮ್ಮಚಕ್ರ ಪ್ರವರ್ತನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಕ್ಷಿದಾರರಿಗೆ ನ್ಯಾಯ ಕೊಡಿಸುವಲ್ಲಿ ಬಹಳಷ್ಟು ವಕೀಲರು ಮುಂದಿದ್ದಾರೆ. ಆದರೆ, ಅಂಬೇಡ್ಕರ್‌ ಅವರು ತುಳಿತಕ್ಕೊಳಗಾದ ಇಡೀ ದೇಶದ ಜನತೆಗೆ ನ್ಯಾಯ ಕೊಡಿಸಿದರು. ಭಾರತದ ಶೋಷಿತ ಜನಾಂಗಕ್ಕೆ, ದೀನದಲಿತರಿಗೆ ಅವರು ನ್ಯಾಯಾಂಗದ ಮೂಲಕ ಸಮಾನತೆಯ ಪುಣ್ಯ ತಂದುಕೊಟ್ಟರು. ಇತಿಹಾಸ ಕಂಡ ದೊಡ್ಡ ಕ್ರಾಂತಿಗಳಲ್ಲಿ ಇದು ಮುಂಚೂಣಿಯಲ್ಲಿ ಕೇಳಿಬರುವಂಥದ್ದು’ ಎಂದರು.

‘ಇಂತಹ ಮಹಾನ್ ನಾಯಕರನ್ನು ಸ್ಮರಿಸುವಂತಹ ಕಾರ್ಯಕ್ರಮಗಳು ಹೆಚ್ಚು ನಡೆಯುಬೇಕು. ಅವರ ಜೀವನ ದಾರಿಯನ್ನು ವಿದ್ಯಾರ್ಥಿಗಳಲ್ಲಿ ಸಂಪೂರ್ಣವಾಗಿ ತುಂಬಬೇಕು. ಅಂದಾಗ ಮಾತ್ರ ಕಾರ್ಯಕ್ರಮ ಅರ್ಥಬರುತ್ತದೆ’ ಎಂದರು.

‘ಬಸವಣ್ಣ, ಡಾ.ಅಂಬೇಡ್ಕರ್, ಕನಕದಾಸರ, ಮಹರ್ಷಿ ವಾಲ್ಮೀಕಿ ಅವರಂಥ ಶ್ರೇಷ್ಠ ಶರಣರು, ದಾಸರು, ದಾರ್ಶನಿಕರ ಜೀವನ ಇತಿಹಾಸವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಓದಬೇಕು. ಆಗ ಮಾತ್ರ ನೀವು ದೇಶವನ್ನು ನಿಜವಾದ ಸ್ವರೂಪದಲ್ಲಿ ಅರ್ಥ ಮಾಡಿಕೊಳ್ಳಲು ಆಧ್ಯ. ನಮ್ಮ ಇತಿಹಾಸವೇ ನಿಮ್ಮಲ್ಲಿ ಗಟ್ಟಿ ವ್ಯಕ್ತಿತ್ವ ತುಂಬಬಲ್ಲದು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಮಾತನಾಡಿದರು. ಬೀದರ್‌ನ ಧಮ್ಮದೀಪ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ವಿಭಾಗೀಯ ಅಧ್ಯಕ್ಷ ಸಂಜೀವ ಟಿ.ಮಾಲಿ, ಕೃಷ್ಣಪ್ಪ ಮದನಕರ್, ವಾಣಿಜ್ಯ ತೆರಿಗೆ ಆಯುಕ್ತರಾದ ನೀಲಗಂಗಾ ಬಬಲಾದ, ಎ.ಬಿ. ಹೊಸಮನಿ, ಹಣಮಂತ ಬೋಧನಕರ್, ಎಂ.ಎನ್. ಸುಗಂಧಿ, ನಿಂಗಪ್ಪ ಕಸನ್, ಶಂಕರ, ದಶರತ ಚೌಧರಿ, ತ್ರೀಶೂಲಾ ನಂದೂರಕರ್, ಪ್ರಿಯಾಂಕಾ ಶಾಸಿ, ಜೀವನ ಧನಕರ್, ಶಾಂತಕುಮಾರ ಕೇರೂರ, ಶಿವಮೂರ್ತಿ ಬಲಿಚಕ್ರವರ್ತಿ, ಪಾಂಡುರಂಗ ಕೋಟ್ರೆ, ರಾಜು ಹರಸೂರ,ಬಸವರಾಜ, ಮಿಲಿಂದ ಕಣ್ಮುಷ ಇದ್ದರು. ನಂದಕೂಮಾರ ತಳಕೇರಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರತಿಕ್ರಿಯಿಸಿ (+)