ಸೇಡಂ: ‘ನಮ್ಮ ತಾಲ್ಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಅಧಿಕಾರಿಗಳು ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಜನರಿಗೆ ಸ್ಪಂದಿಸುತ್ತಿರುವ ಕಾರ್ಯ ಶ್ಲಾಘನೀಯ’ ಎಂದು ಸಚಿವ ಡಾ.ಶರಣಪ್ರಕಾಶ ಹೇಳಿದರು.

ಸೇಡಂ ತಾಲ್ಲೂಕಿನ ಇಂದಿರಾನಗರ ತಾಂಡಾದಲ್ಲಿ ಈಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಣಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ ಲಿಂಗಪಲ್ಲಿ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಇಂದಿರಾ ನಗರ ಇವರ ಸಹಭಾಗಿತ್ವದಲ್ಲಿ ಹೂಳೆತ್ತಲಾದ ರಾಜ್ಯದ 879 ನೇ ‘ನಮ್ಮೂರ ಕೆರೆ’ ನಾಮಫಲಕ ಅನಾವರಣ ಮತ್ತು ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜನರು ಪ್ರಾಮಾಣಿಕವಾಗಿ ಸಂಘದ ಜೊತೆ ಕೆಲಸ ಮಾಡಿ ಆರ್ಥಿಕ ಸಹಾಯ ಪಡೆದು ಚಟುವಟಿಕೆಗಳನ್ನು ಆರಂಭಿಸಿ, ಸ್ವಾವಲಂಬಿ ಜೀವನ ರೂಪಿಸಿಕೊಳ್ಳಬೇಕು. ಕೆರೆ ಅಭಿವೃದ್ಧಿಯ ಕಾರ್ಯ ಹಿರಿದಾಗಿದೆ’ ಎಂದು ನುಡಿದರು.

ಧರ್ಮಸ್ಥಳದ ಪ್ರಾದೇಶಿಕ ನಿರ್ದೇಶಕ ದಿನೇಶ ಪೂಜಾರಿ ಮಾತನಾಡಿ, ‘ಈ ಭಾಗದಲ್ಲಿ ಕಳೆದ 10 ವರ್ಷಗಳಿಂದ ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಮಹಿಳಾ ಸಂಘ, ತರಬೇತಿ, ಕಿರು ಸಾಲ, ಪ್ರತಿಭೆಗಳ ಪ್ರೋತ್ಸಾಹ, ದೇವಾಲಯಗಳ ಜೀರ್ಣೋದ್ಧಾರ, ಮನೆ ಇಲ್ಲದವರಿಗೆ ಮನೆ ಆಸರೆ ಜೊತೆಗೆ ಕೆರೆ ಹೂಳೆತ್ತುವ ಕೆಲಸ ಮಾಡಿದ್ದೇವೆ’ ಎಂದರು.

ಕೆರೆಗೆ ಬಾಗಿನ ಅರ್ಪಣೆ ಹಾಗೂ ಗಂಗಾ ಪೂಜೆ ಕಾರ್ಯಕ್ರಮವನ್ನು ಗುಂಡೆಪಲ್ಲಿಯ ಸೋಮೇಶ್ವರ ಸಂಸ್ಥಾನದ ಮಠದ ಶಿವಸಿದ್ಧ ಸೋಮೆಶ್ವರ ಶಿವಾಚಾರ್ಯರು ನೆರವೇರಿಸಿದರು. ಸಂಘದ ತಾಲ್ಲೂಕು ಯೋಜನಾಧಿಕಾರಿ ಎಸ್.ಜಿ.ಮಂಜುನಾಥ, ಶಂಕರ ಬಂಡಿ, ಮಹಾನಂದ, ಜ್ಯೋತಿ, ವಿಜಯಲಕ್ಷ್ಮೀ, ಸದಾಶಿವರೆಡ್ಡಿ ಗೋಪನಪಲ್ಲಿ, ಗೋವರ್ಧನರೆಡ್ಡಿ ಲಿಂಗಂಪಲ್ಲಿ, ಹೇಮ್ಲಾನಾಯಕ, ಹರಿಶ್ಚಂದ್ರ ನಾಯಕ, ಚಂದ್ರಪ್ಪ ಇರ್ನಾಪಲ್ಲಿ, ಶಿವಕುಮಾರ ಪಾಟೀಲ, ರಾಜು ಕಡತಾಲ, ರಾಮು ನಾಯಕ, ಸ್ಮಾಯಿಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.