ಕೆಂಭಾವಿ: ಸಮೀಪದ ಕೂಡಲಗಿ ಗ್ರಾಮದಲ್ಲಿ ಅಧಿಕಮಾಸದ ಪ್ರಯುಕ್ತ ಸದ್ಗುರು ಶಾಂತಾನಂದ ಸರಸ್ವತಿ ಸ್ವಾಮಿಗಳ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ರುದ್ರ ಸ್ವಾಹಾಕಾರ, ಪವಮಾನ ಹೋಮ ಹಾಗೂ ಅನೇಕ ಧಾರ್ಮಿಕ ಕಾರ್ಯಗಳು ಜರುಗಿದವು.

ಧಾರವಾಡದ ಶಂಕರಾಚಾರ್ಯ ಸಂಸ್ಕೃತ ಪಾಠ ಶಾಲೆಯ ಅಧ್ಯಾಪಕ ಶಿವಸ್ವಾಮಿ ಶಾಸ್ತ್ರಿ ಮಾತನಾಡಿ, ‘ಅಧಿಕ ಮಾಸದಲ್ಲಿ ಇಂತಹ ಹೋಮ ಹವನಗಳನ್ನು ಮಾಡುವುದರಿಂದ ಲೋಕ ಕಲ್ಯಾಣವಾಗುತ್ತದೆ ಹಾಗೂ ಜನರಲ್ಲಿ ಸೌಹಾರ್ದ ಬೆಳೆಯುತ್ತದೆ. ಅಧಿಕಮಾಸದಲ್ಲಿ ಅಧಿಕಸ್ಯ ಅಧಿಕ ಫಲಂ ಎಂಬಂತೆ ದಾನ ಧರ್ಮಗಳನ್ನು ಮಾಡುವುದರಿಂದ ಅಧಿಕವಾದಂತಹ ಫಲ ದೊರಕಲಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕಮಾಸ ಎಲ್ಲ ಜನರಲ್ಲಿ ಸುಖ ಶಾಂತಿ, ನೆಮ್ಮದಿ ನೀಡಲೆಂದು ಮಹಾವಿಷ್ಣುವಿನಲ್ಲಿ ಪ್ರಾರ್ಥಿಸೋಣ’ ಎಂದು ಹೇಳಿದರು.

ವಲ್ಲಭ ಭಟ್ ಜೋಶಿ ಅವರು ಅಧಿಕಮಾಸದ ಮಹಾತ್ಮೆಯ ಕುರಿತು ಮಾತನಾಡಿ, ಅಧಿಕ ಮಾಸವು ಅತ್ಯಂತ ವಿಶೇಷವಾದ ಮಾಸವಾಗಿದ್ದು, ಈ ಮಾಸದಲ್ಲಿ ವಿಷ್ಣು ಸೂರ್ಯ ಮತ್ತು ಶಿವ ಈ ಮೂರು ದೇವರನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಅಧಿಕಮಾಸದಲ್ಲಿ ವಿಶೇಷ ಪೂಜೆ, ದಾನ-ಧರ್ಮ ಮತ್ತು ಆಧ್ಯಾತ್ಮಿಕ ಚಿಂತನೆಗೆ ಅತ್ಯಂತ ಶ್ರೇಷ್ಠವಾಗಿದ್ದು. ಈ ಪವಿತ್ರ ಮಾಸವು ನಿಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ, ಮತ್ತು ಒಳಿತಾಗಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 33 ದಂಪತಿಯ ಪೂಜೆಯನ್ನು ನೆರವೇರಿಸಿ ದಾನವನ್ನು ಕೊಡಲಾಯಿತು. ಮಠದ ಪೀಠಾಧಿಪತಿ ಉಮಾಕಾಂತ ಸಿದ್ದರಾಜ ಮಹಾರಾಜರ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ನೆರವೇರಿದವು.

ಮೃತ್ಯುಂಜಯ ಮಹಾರಾಜ, ಗಜಾನನ ಮಹಾರಾಜ, ಗಂಗಾಧರ ಜೋಶಿ, ಭಿಮಾಶಂಕರ್ ಜೋಶಿ, ಸಂತೋಷ ಮಹಾರಾಜ, ಸಿಂಧನ ಮಡು ಬ್ರಹ್ಮಾನಂದ ಭಟ್, ಕನಕಗಿರಿ ಲೋಕೇಶ ಜೋಶಿ, ಶ್ರೀಧರ ಆರ್ಚಕ ಸನ್ನತಿ, ಅನಂತ ಕೊರವಿ, ಸಂಜೀವ ಬೀಳಗಿ, ವಿಶ್ವಂಭರ ಜೋಶಿ, ನಾರಾಯಣ ಭಟ್ಟ ಜೋಶಿ, ತಿರುಮಲಾಚಾರ ಜೋಶಿ, ನರಹರಿ ಪೂಜಾರ, ದಿಗಂಬರ್ ಪೂಜಾರ, ಅಶ್ವಥ ಮಹಾರಾಜ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-30-2124810996

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.