ಶುಕ್ರವಾರ, ಜನವರಿ 27, 2023
20 °C

ಕಲಬುರಗಿ: ಡಿಐಜಿ ಅನುಪಮ್ ಅಗರವಾಲ್ ಅಧಿಕಾರ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಈಶಾನ್ಯ ವಲಯ ನೂತನ ಡಿಐಜಿ ಆಗಿ 2008ನೇ ವೃಂದದ ಐಪಿಎಸ್ ಅಧಿಕಾರಿ ಅನುಪಮ್ ಅಗರವಾಲ್ ಮಂಗಳವಾರ ನಗರದ ಪೊಲೀಸ್ ಭವನದಲ್ಲಿ ಅಧಿಕಾರ ವಹಿಸಿಕೊಂಡರು. ಇದಕ್ಕೂ ಮುನ್ನ ಐಜಿಪಿಯಾಗಿದ್ದ ಮನೀಷ್ ಖರ್ಬಿಕರ್ ಅವರು ಎಡಿಜಿಪಿಯಾಗಿ ಬಡ್ತಿ ಹೊಂದಿದ್ದಾರೆ.

ಹೀಗಾಗಿ, ಈಶಾನ್ಯ ವಲಯದ ಖಾಲಿ ಹುದ್ದೆಗೆ ಮೊದಲು ಉತ್ತರ ವಲಯದ ಐಜಿಪಿ ಎನ್.ಸತೀಶಕುಮಾರ್ ಅವರನ್ನು ವರ್ಗಾಯಿಸಲಾಗಿತ್ತು.

ಆದರೆ, ಸೋಮವಾರ ಆದೇಶ ಮಾರ್ಪಾಟು ಮಾಡಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅನುಪಮ್ ಅಗರವಾಲ್ ಅವರನ್ನು ಕಲಬುರಗಿ ಈಶಾನ್ಯ ವಲಯದ ಡಿಐಜಿ ಹುದ್ದೆಗೆ ವರ್ಗಾಯಿಸಿತು.

ನೂತನ ಡಿಐಜಿ ಅವರನ್ನು ಎಸ್ಪಿ ಇಶಾ ಪಂತ್ ಬರಮಾಡಿಕೊಂಡರು. ಅಧಿಕಾರ ವಹಿಸಿಕೊಂಡ ನಂತರ ಅನುಪಮ್ ಅವರು ಅಧಿಕಾರಿಗಳ ಸಭೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು