ಕಲಬುರಗಿ: ‘ದೇವರನ್ನು ಜಾತಿ- ಧರ್ಮದ ಬೇಲಿಯೊಳಗೆ ಬಂಧಿಸಬೇಡಿ. ಅವನ ಹೆಸರಿನಲ್ಲಿ ಸಮಾಜವನ್ನು ಒಡೆಯಬೇಡಿ’ ಎಂದು ಚಿನ್ಮಯಗಿರಿಯ ಗುರುಮಹಾಂತೇಶ್ವರ ಮಠದ ವೀರಮಹಾಂತೇಶ್ವರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಕಡಣಿಯಲ್ಲಿ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ ಲಚ್ಯಾಣದ ಸಿದ್ಧಲಿಂಗ ಮಹಾರಾಜರ ಪುರಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮನುಷ್ಯ ಮತ್ತು ದೇವರ ನಡುವಿನ ಸಂಬಂಧ, ಜಾತಿ, ಧರ್ಮಗಳ ಜೊತೆ ಹೋಲಿಕೆ ಮಾಡುವುದು ಸಲ್ಲದು ಎಂದಿರುವ ಅವರು, ಜಾತಿವಾದಿಗಳ ವಿಚಾರಗಳಿಗೆ ಮರಳಾಗಬೇಡಿ ಎಂದರು.

ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ಮಾಡಿದರು.

ಜೋಗೂರಿನ ಗುರುಲಿಂಗಯ್ಯ ಸ್ವಾಮಿ ಗಣಾಚಾರಿ, ಕಡಣಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಇಸರಿ, ನಿರ್ದೇಶಕರಾದ ಭೀಮಶಾ ಪಾಟೀಲ, ಗುಂಡೇರಾಯ ಈಶ್ವರಪ್ಪ ಕರಿಕಲ್, ಅಶೋಕ ಹದರಿ, ಶ್ಯಾಮರಾವ ಸೋನಾರ, ರಾಜಶೇಖರ ಕಡ್ಲಾ, ತೇಜಿರಾಯ ಆಲಗೂಡ ಸೇರಿದಂತೆ ಇತರರು ಹಾಜರಿದ್ದರು.

ವಕೀಲ ದೇವೆಂದ್ರ ಎಕಲೂರ ನಿರೂಪಿಸಿ, ಸ್ವಾಗತಿಸಿದರು. ಸಂತೋಷ ಹರಸೂರಮಠ ಅವರ ಸಂಗೀತಕ್ಕೆ ಸುರೇಶ ಆಳಂದ ತಬಲಾ ಸಾಥ್ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.