ಶನಿವಾರ, ಆಗಸ್ಟ್ 24, 2019
27 °C

ಮನೆಯಲ್ಲಿದ್ದ ವೃದ್ಧೆಯ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ನಾಯಿ

Published:
Updated:

ಕಲಬುರ್ಗಿ: ಮನೆಯಲ್ಲಿ ಮಲಗಿದ್ದ ವೃದ್ಧೆಗೆ ಬೀದಿನಾಯಿಯೊಂದು ತಾಜ ಸುಲ್ತಾನಪುರ ಬಳಿ ಇರುವ ಕಮಲಾನಗರದಲ್ಲಿ ಭಾನುವಾರ ಕಚ್ಚಿ ಪರಾರಿಯಾಗಿದೆ.

ಗಂಗೂಬಾಯಿ ಚವ್ಹಾಣ (65) ಎಂಬುವವರೇ ಗಾಯಗೊಂಡ ವೃದ್ಧೆ. ಮನೆಯ ಗೇಟು ತೆಗೆದ ಸ್ಥಿತಿಯಲ್ಲಿತ್ತು. ಈ ಸಂದರ್ಭದಲ್ಲಿ ಮನೆಯೊಳಗೇ ಬಂದ ನಾಯಿ ಗಂಗೂಬಾಯಿ ಅವರ ಬಲಗೈ ತೋಳಿಗೆ ತೀವ್ರವಾಗಿ ಕಚ್ಚಿದೆ. ಇದರಿಂದಾಗಿ ಮೂರು ನಾಲ್ಕು ಕಡೆ ಗೀರುಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದ್ದ ಗಂಗೂಬಾಯಿ ಅವರು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಸಾಮಾನ್ಯವಾಗಿ ಬೀದಿಯಲ್ಲಿ ಹೋಗುವಾಗ ನಾಯಿಗಳು ಕಚ್ಚುವುದು ಸಾಮಾನ್ಯ. ಆದರೆ, ಮನೆಗೇ ಬಂದು ಕಚ್ಚಿ ಪರಾರಿಯಾಗಿದ್ದು ಕುಟುಂಬದವರು ಹಾಗೂ ನೆರೆಹೊರೆಯವರಲ್ಲಿ ಗಾಬರಿ ಮೂಡಿಸಿದೆ.

Post Comments (+)