ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ‌: ಗಾರಂಪಳ್ಳಿ ಬಸವೇಶ್ವರ ದೇವಾಲಯದ ಹುಂಡಿ ಕಳವು

Last Updated 3 ಏಪ್ರಿಲ್ 2023, 5:41 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರಗಿ‌): ತಾಲ್ಲೂಕಿನ ಬಸವೇಶ್ವರ ದೇವಾಲಯದ ಹುಂಡಿಯನ್ನು ಕಳ್ಳರು ಹೊತ್ತೊಯ್ದ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಬಸವ ಜಯಂತಿಯ ನಂತರ ಬಸವೇಶ್ವರ ಜಾತ್ರೆ ನಡೆಯಲಿದೆ. ಇದಕ್ಕೂ ಮೊದಲು ಹುಂಡಿಪೆಟ್ಟಿಗೆ ತೆರೆಯಬೇಕಿತ್ತು. ಆದರೆ, ಹುಂಡಿ ಪೆಟ್ಟಿಗೆಯನ್ನೇ ದೇವಾಲಯದ ಕೀಲಿ‌ಮುರಿದು ತಡರಾತ್ರಿ ಎಗರಿಸಿದ್ದಾರೆ ಎಂದು ಗ್ರಾಮದ ಮುಖಂಡ ಹಣಮಂತ ಭೋವಿ ದೂರಿದ್ದಾರೆ.

ಬಸವೇಶ್ವರ ದೇವಾಲಯ ಹಳೆ ಊರು ಹಾಗೂ ಹೊಸ ಊರಿನ ಮಧ್ಯೆ ಬರುವ ಮುಲ್ಲಾಮಾರಿ ನದಿ ದಂಡೆಯ ಮೇಲಿದೆ. ಇಲ್ಲಿ ಮಾ.27ರಂದು ಹುಂಡಿ ಕಳ್ಳತನಕ್ಕೆ ಯತ್ನ ನಡೆದಿತ್ತು. ಹುಂಡಿ ಪೆಟ್ಟಿಗೆ ದೇವಾಲಯದಿಂದ ಹೊರಗಡೆ ತಂದಿದ್ದರು. ಅಷ್ಟರಲ್ಲಿ ಜನರು ಬಂದಿದ್ದರಿಂದ ಕಳ್ಳರು ಕಾಲ್ಕಿತ್ತಿದ್ದರು. ಆದರೆ, ಭಾನುವಾರ ರಾತ್ರಿ ಕಳ್ಳರು ಹುಂಡಿ ದೋಚುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಂಚೋಳಿ ಠಾಣೆಯ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT