ಕೊಡಲಿಯಿಂದ ಕೊಚ್ಚಿ ಜೋಡಿ ಕೊಲೆ

ಶುಕ್ರವಾರ, ಜೂನ್ 21, 2019
22 °C
ಬೆಳಗುಂಪಾ ಗ್ರಾಮ: ಅನೈತಿಕ ಸಂಬಂಧ ಶಂಕೆ

ಕೊಡಲಿಯಿಂದ ಕೊಚ್ಚಿ ಜೋಡಿ ಕೊಲೆ

Published:
Updated:

ಕಲಬುರ್ಗಿ: ಅನೈತಿಕ ಸಂಬಂಧದ ಶಂಕೆಯ ಮೇರೆಗೆ ತಾಲ್ಲೂಕಿನ ಬೆಳಗುಂಪಾ ಗ್ರಾಮದಲ್ಲಿ ಮಂಗಳವಾರ ಮಹಿಳೆ ಮತ್ತು ಆಕೆಯ ಪ್ರಿಯಕರ ಎನ್ನಲಾದ ವ್ಯಕ್ತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಮಡೆಮ್ಮ ಭೀಮಾಶಂಕರ ಮಾಂಗ (28) ಮತ್ತು ಶಂಕರ ಮ್ಯಾಕೇರಿ (40) ಕೊಲೆಯಾದವರು. ಇಬ್ಬರೂ ವಿವಾಹಿತರಾಗಿದ್ದು, ಇಬ್ಬರಿಗೂ ಎರಡು ಮಕ್ಕಳಿವೆ. ಇಬ್ಬರ ಮಧ್ಯೆಯೂ ಅನೈತಿಕ ಸಂಬಂಧ ಇತ್ತು ಎಂದು ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.

‘ಮಡೆಮ್ಮಳ ಪತಿ ಭೀಮಾಶಂಕರ ಆಕೆಯನ್ನು ಬಿಟ್ಟು ಹೋಗಿದ್ದ. ಹೀಗಾಗಿ ಬೆಳಗುಂಪಾ ಗ್ರಾಮದಲ್ಲಿಯೇ ಸಹೋದರ ಸಂಬಂಧಿಕರ ಜತೆಗೆ ವಾಸವಾಗಿದ್ದಳು. ಅದೇ ಗ್ರಾಮದ ಶಂಕರ ಮ್ಯಾಕೇರಿಯೊಂದಿಗೆ ಕೆಲವು ದಿನಗಳಿಂದ ಸಂಬಂಧ ಇತ್ತು. ಶಂಕರನಿಂದ ದೂರವಿರುವಂತೆ ಹಲವು ಸಲ ಸಂಬಂಧಿಗಳು ಹೇಳಿದ್ದರು. ಆದರೂ, ಮುಂದುವರೆಸಿದ್ದರು’ ಎನ್ನುವುದು ಪೊಲೀಸ್‌ ಮೂಲಗಳ ಮಾಹಿತಿ.

‘ಮಂಗಳವಾರ ಸಂಜೆ ಮಡೆಮ್ಮ ಹಾಗೂ ಶಂಕರ ಒಟ್ಟಿಗೇ ಕೋಣೆಯಲ್ಲಿದ್ದರು. ಈ ವೇಳೆ ಅಲ್ಲಿಗೆ ಬಂದ ಹಂತಕರು, ಮಡೆಮ್ಮಳನ್ನು ಕೋಣೆಯಲ್ಲಿಯೇ ಕೊಚ್ಚಿ ಹಾಕಲಾಗಿದೆ. ಓಡಿ ಹೋಗಲು ಯತ್ನಿಸಿದ ಶಂಕರನನ್ನು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದಾರೆ. ಕೊಲೆಯನ್ನು ಯಾರು ಮಾಡಿದ್ದಾರೆ ಎಂಬುದು ನಿಖರವಾಗಿ ಗೊತ್ತಾಗಿಲ್ಲ. ಶೋಧ ಮುಂದುವರೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಇನ್‌ಸ್ಪೆಕ್ಟರ್‌ ಜ್ಯೋತಿರ್ಲಿಂಗ ಹೊನ್ನಾಕಟ್ಟಿ, ಪಿಎಸ್ಐ ಭೀಮರತ್ನ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಫರಹತಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !