ಚಿತ್ರಕಲಾ ಸ್ಪರ್ಧೆ; ಬಹುಮಾನ ವಿತರಣೆ

ಶನಿವಾರ, ಮೇ 25, 2019
33 °C

ಚಿತ್ರಕಲಾ ಸ್ಪರ್ಧೆ; ಬಹುಮಾನ ವಿತರಣೆ

Published:
Updated:
Prajavani

ಕಲಬುರ್ಗಿ: ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ, ಗುಲಬರ್ಗಾ ವಿಶ್ವವಿದ್ಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಚೈತನ್ಯಮಯಿ ಆರ್ಟ್‌ ಗ್ಯಾಲರಿ, ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ 6ನೇ ಚಿತ್ರಸಂತೆ ಅಂಗವಾಗಿ ಈಚೆಗೆ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗುರುವಾರ ಬಹುಮಾನ ವಿತರಿಸಲಾಯಿತು.

ಚಿತ್ರ ರಚನಾ ಸ್ಪರ್ಧೆಯಲ್ಲಿ ನಗರದ ವಿವಿಧ ಶಾಲೆಗಳ ಸುಮಾರು 800ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ‘ಅರಣ್ಯ ರಕ್ಷಿಸಿ’, ‘ಹಳ್ಳಿ ಜೀವನ ಮತ್ತು ಸೂರ್ಯೋದಯ/ಸೂರ್ಯಾಸ್ತ’ ಕುರಿತು ಸ್ಪರ್ಧೆ ಆಯೋಜಿಸಲಾಗಿತ್ತು.

ವಿಜೇತರ ವಿವರ: 1–4ನೇ ತರಗತಿ: ರೀಮಾ, ಶ್ರೀ ಗುರು ವಿದ್ಯಾಪೀಠ (ಪ್ರಥಮ), ಸಮೃದ್ಧ ಆರ್.ಎಂ., ಶ್ಲೋಕ ಬಿರ್ಲಾ ಶಾಲೆ (ದ್ವಿತೀಯ), ಭಕ್ತಿ, ಕೇಂದ್ರೀಯ ವಿದ್ಯಾಲಯ (ತೃತೀಯ), ಅನುಷ್ಕಾ ಜಿ.ಪವಾರ, ಚಂದ್ರಕಾಂತ ಪಾಟೀಲ ಪಬ್ಲಿಕ್ ಶಾಲೆ (ಸಮಾಧಾನಕರ).

5–7ನೇ ತರಗತಿ: ಪವನ ಕೆ.ಪೊದ್ದಾರ, ಎಸ್‌ಬಿಆರ್ ಶಾಲೆ (ಪ್ರಥಮ), ಶಶಾಂಕ ಕೆ.ಕೋಲಕಾರ, ಡಾರ್ವಿನ್ ಹಿರಿಯ ಪ್ರಾಥಮಿಕ ಶಾಲೆ, ಜಾಲಹಳ್ಳಿ (ದ್ವಿತೀಯ), ಶೆರಿಯಾ ಎಸ್.ಪಾಟೀಲ, ಕೆನ್ ಬ್ರೀಡ್ಜ್ ಸ್ಕೂಲ್ (ತೃತೀಯ), ಸಂಧ್ಯಾರಾಣಿ, ಶಖೈನ್ ಬ್ಯಾಪ್ಟಿಸ್ಟ್ ಅಕಾಡೆಮಿ (ಸಮಾಧಾನಕರ).

8–10ನೇ ತರಗತಿ: ಸುಮಿತ್ ಸಾಗರ, ವಿ.ಟಿ.ಎಸ್. ಪ್ರೌಢಶಾಲೆ (ಪ್ರಥಮ), ಮೋನಿಕಾ, ಕನ್ನಡ ಕಾನ್ವೆಂಟ್ ಪ್ರೌಢಶಾಲೆ (ದ್ವಿತೀಯ), ಶ್ರೀದೇವಿ ಎಸ್.ರಾಠೋಡ, ಸೇಂಟ್ ಜೋಸೆಫ್ ಶಾಲೆ (ತೃತೀಯ), ವೈಶಾಲಿ ಬಿ., ಕೆಜಿಪಿ ಪ್ರೌಢಶಾಲೆ (ಸಮಾಧಾನಕರ).

ಬಹುಮಾನ ವಿತರಣಾ ಸಮಾರಂಭದಲ್ಲಿ ವಿಕಾಸ ಅಕಾಡೆಮಿ ವಿಶ್ವಸ್ಥ ವಿ.ಶಾಂತರೆಡ್ಡಿ, ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಹಾಗೂ ಚಿತ್ರ ಸಂತೆಯ ಸಂಯೋಜಕ ಡಾ.ಪರಶುರಾಮ ಪಿ., ಚೈತನ್ಯಮಯಿ ಆರ್ಟ್‌ ಗ್ಯಾಲರಿ ಸಂಚಾಲಕ ದಿನೇಶ ಪಾಟೀಲ, ದಿ ಆರ್ಟ್‌ ಇಂಟಿಗ್ರೇಶನ್ ಫೈನ್ ಆರ್ಟ್ ಕಾಲೇಜಿನ ಪ್ರಾಂಶುಪಾಲ ಎಂ.ಎಚ್.ಬೆಳಮಗಿ, ಚಿತ್ರಕಲಾ ಶಿಕ್ಷಕರಾದ ದೌಲತರಾಯ ದೇಸಾಯಿ, ಸಿದ್ದು ಮರಗೋಳ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !