ಭಾನುವಾರ, ಫೆಬ್ರವರಿ 16, 2020
25 °C
ನೀರಿನ ಟ್ಯಾಂಕ್‌ ಶಿಥಿಲ, ಅಪಾಯದಲ್ಲಿ ನಿವಾಸಿಗಳು

ಯಡ್ರಾಮಿ: ನಲ್ಲಿ ನೀರು ಪೋಲು

ಮಂಜುನಾಥ ದೊಡಮನಿ Updated:

ಅಕ್ಷರ ಗಾತ್ರ : | |

Prajavani

ಯಡ್ರಾಮಿ: ಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ಕಚೇರಿಯ ಮುಂಭಾಗದಲ್ಲೇ ಇರುವ ಕುಡಿಯುವ ನೀರಿನ ಓವರ್‌ಹೆಡ್‌ ಟ್ಯಾಂಕ್‌ ಸಂಪೂರ್ಣ ಶಿಥಿಲಗೊಂಡು ಯಾವಾಗ ಬೇಕಾದರೂ ಕುಸಿದು ಬೀಳುವ  ಆತಂಕ ಎದುರಾಗಿದೆ.

ಹಾಗೆಯೇ  ಪಂಚಾಯಿತಿ ಕಚೇರಿಯ ಪಕ್ಕದಲ್ಲಿರುವ  ನಲ್ಲಿ ನೀರಿನ ಟ್ಯಾಂಕ್‌ನಲ್ಲಿ ನೀರು ಸೋರಿ ಪೋಲಾಗುತ್ತಿದೆ. ಸುಮಾರು ಎರಡು ವರ್ಷಗಳಿಂದ ಹೀಗೇ ಇದೆ.

ಗ್ರಾಮಸ್ಥರು ವಿವಿಧ ಕೆಲಸಗಳಿಗಾಗಿ ಯಡ್ರಾಮಿಗೆ ಬಂದಾಗ ಈ ನಲ್ಲಿಗೆ ನೀರು ಕುಡಿಯಲು ಬರುತ್ತಾರೆ. ಸ್ಥಳೀಯ ನಿವಾಸಿಗಳಿಗೂ ಇದೇ ನೀರು ಆಸರೆಯಾಗಿದೆ. ಅವರು ನೀರು ತೆಗೆದುಕೊಂಡು ಹೋದ ನಂತರ ನಲ್ಲಿ ನೀರು ಬಂದ್ ಆಗದೆ ಚರಂಡಿಗೆ ಸೇರುತ್ತಿದೆ.

ಗ್ರಾಮಸ್ಥರು ಮತ್ತು ಸ್ಥಳೀಯ ನಿವಾಸಿಗಳು ವಿಶ್ರಾಂತಿ ಪಡೆಯಲು ಓವರ್‌ ಹೆಡ್‌ ಟ್ಯಾಂಕ್‌ ಅಡಿಯಲ್ಲಿ ನೆರಳಲ್ಲಿ ಕೂರುವುದು, ಮಲಗುವುದು ಮಾಡುತ್ತಾರೆ. ಆದ್ದರಿಂದ ಈ ಟ್ಯಾಂಕನ್ನು ಆದಷ್ಟು ಬೇಗೆ ತೆರವು ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ 2017ರಲ್ಲೇ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಪಿ.ಡಿ.ಒ.ಗೆ ಮಾಡಿಕೊಂಡ ಮನವಿಗೆ ಇದುವರೆಗೆ ಸ್ಪಂದನೆ ದೊರಕಿಲ್ಲ ಎಂದು ನಿವಾಸಿಗಳು ಹೇಳುತ್ತಾರೆ.

ಪಟ್ಟಣದಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲ, ಬಸ್ ನಿಲ್ದಾಣದ ಎದುರೇ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುತ್ತದೆ. ನಾಗರಹಳ್ಳಿಗೆ ಹೋಗುವ ಮಾರ್ಗದಲ್ಲಿ ಒಳಚರಂಡಿ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಪಟ್ಟಣದ ಬಹುತೇಕ ವಾರ್ಡ್‍ಗಳಲ್ಲಿ ಸಿಸಿ ರಸ್ತೆ ಇಲ್ಲ. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ಕಸಕಡ್ಡಿಗಳು ತುಂಬಿಕೊಂಡಿವೆ, ಹಂದಿಗಳ ವಾಸಸ್ಥಾನವಾಗಿವೆ.

ಯಡ್ರಾಮಿ ಈಗ ತಾಲ್ಲೂಕು ಕೇಂದ್ರವಾಗಿದ್ದು ಮೂಲ ಸೌಲಭ್ಯಗಳ ಕೊರತೆಯಿಂದ ನಾನಾ ಸಮಸ್ಯೆಗಳು ತಾಂಡವವಾಡುತ್ತಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ತಾಲ್ಲೂಕು ಕೇಂದ್ರವನ್ನು ಆದಷ್ಟು ಬೇಗ ಅಭಿವೃದ್ಧಿ ಪಡಿಸಿ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು