ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಸೇವಿಸಿ ಮರದಲ್ಲೇ ನಿದ್ದೆ ಮಾಡಿದ ಭೂಪ!

Last Updated 28 ಜೂನ್ 2020, 13:42 IST
ಅಕ್ಷರ ಗಾತ್ರ

ಕಲಬುರ್ಗಿ: ವಿಪರೀತ ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ಇಲ್ಲಿನ ಜಿಮ್ಸ್‌ ಆಸ್ಪತ್ರೆಯ ಆವರಣದಲ್ಲಿರುವ ಬೃಹತ್‌ ಮರದ ಮೇಲೇರಿ ಅಲ್ಲಿಯೇ ನಿದ್ದೆ ಹೋಗಿರುವುದನ್ನು ಸಾರ್ವಜನಿಕರು ಹಾಗೂ ಪೊಲೀಸರು ಪತ್ತೆ ಹಚ್ಚಿ ಭಾನುವಾರ ಕೆಳಗಿಳಿಸಿದ್ದಾರೆ.

ಮರವೇರಿ ಅದರ ಕೊಂಬೆಯನ್ನು ಆಸರೆ ಮಾಡಿಕೊಂಡು ನಿಂತಲ್ಲಿಯೇ ನಿದ್ದೆ ಹೋಗಿದ್ದ ವ್ಯಕ್ತಿಯನ್ನು ಗಮನಿಸಿದ ಆಸ್ಪತ್ರೆಗೆ ಬಂದಿದ್ದವರು ತಕ್ಷಣ ಆಸ್ಪತ್ರೆಯ ಔಟ್‌ಪೋಸ್ಟ್‌ನಲ್ಲಿರುವ ಪೊಲೀಸರಿಗೆ ಮಾಹಿತಿ ನೀಡಿದರು.

ಮರದ ಬಳಿ ಬಂದ ಪೊಲೀಸರು ಎಷ್ಟು ಕೂಗಿದರೂ ವ್ಯಕ್ತಿ ಓಗೊಡಲಿಲ್ಲ. ಇಬ್ಬರು ಯುವಕರನ್ನು ಮರದ ಮೇಲೆ ಹತ್ತಿಸಿ ಆ ವ್ಯಕ್ತಿಯನ್ನು ಕೆಳಗಿಳಿಸಿಕೊಂಡರು. ಮದ್ಯದ ನಶೆಯಲ್ಲಿಯೇ ಇದ್ದುದರಿಂದ ಹೆಸರು, ಊರು ಕುರಿತ ಮಾಹಿತಿ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT