ಕಲಬುರ್ಗಿಗೆ ಮತ್ತೊಬ್ಬರು ಎಸಿಪಿ ನೇಮಕ

ಗುರುವಾರ , ಜೂಲೈ 18, 2019
28 °C
ಡಿವೈಸ್ಪಿ, ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿದ ಸರ್ಕಾರ

ಕಲಬುರ್ಗಿಗೆ ಮತ್ತೊಬ್ಬರು ಎಸಿಪಿ ನೇಮಕ

Published:
Updated:

ಕಲಬುರ್ಗಿ: ಪೊಲೀಸ್‌ ಕಮಿಷನರೇಟ್‌ ಆರಂಭವಾದಾಗಿನಿಂದ ಖಾಲಿ ಉಳಿದಿದ್ದ ಕಲಬುರ್ಗಿ ‘ಸಿ’ ಉಪವಿಭಾಗದ ಎಸಿಪಿಯನ್ನಾಗಿ ಶರಣಬಸಪ್ಪ ಎಚ್‌.ಸುಬೇದಾರ್‌ ಅವರನ್ನು ಗೃಹ ಇಲಾಖೆ ಗುರುವಾರ ನೇಮಕ ಮಾಡಿದ್ದು, ಚುನಾವಣೆ ಸಮಯದಲ್ಲಿ ಕಲಬುರ್ಗಿ ಸಂಚಾರ ಉಪ ವಿಭಾಗಕ್ಕೆ ವರ್ಗಾವಣೆಯಾಗಿ ಬಂದಿದ್ದ ವೀರೇಶ್‌ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ.

ಬೀದರ್‌ ಡಿವೈಸ್ಪಿಯನ್ನಾಗಿ ಬಸವೇಶ್ವರ, ರಾಯಚೂರು ಜಿಲ್ಲೆ ಲಿಂಗಸುಗೂರು ವಿಭಾಗದ ಡಿವೈಎಸ್ಪಿಯನ್ನಾಗಿ ಹರೀಶ್‌ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಹಲವು ಸರ್ಕಲ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ಈ ಕೆಳಕಂಡ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ. ರವಿ ಸಿ. ಉಕುಂಡ (ಕೊಪ್ಪಳ ಗ್ರಾಮಾಂತರ ವಿಭಾಗ); ಚಂದ್ರಶೇಖರ ಜಿ (ಕುಷ್ಟಗಿ, ಕೊಪ್ಪಳ); ಸುರೇಶ ಎಚ್‌.ತಳವಾರ (ಗಂಗಾವತಿ ಗ್ರಾಮಾಂತರ ವೃತ್ತ, ಕೊಪ್ಪಳ); ದೀಪಕ್‌ ಎಂ. ಬೋಸರೆಡ್ಡಿ (ಮಸ್ಕಿ ವೃತ್ತ, ರಾಯಚೂರು), ರಾಮಪ್ಪ ವಿ.ಸಾವಳಗಿ (ಬೀದರ್‌ ಗ್ರಾಮಾಂತರ ವೃತ್ತ); ಪಾಲಾಕ್ಷಯ್ಯ ಮಾರಕೊಂಡಯ್ಯ (ಕಮಲನಗರ ವೃತ್ತ, ಬೀದರ್‌); ಉಮೇಶ್‌ ಎಂ.ಎಚ್‌. (ಬೀದರ್‌ ಗ್ರಾಮಾಂತರ ವೃತ್ತ); ಶ್ರೀಕಾಂತ ವಿ. ಅಲ್ಲಾಪುರ (ಡಿಸಿಐಬಿ, ಬೀದರ್‌); ಚನ್ನಯ್ಯ ಹಿರೇಮಠ (ಯರಗೇರಾ ವೃತ್ತ, ರಾಯಚೂರು); ಬಾಲಚಂದ್ರ ಡಿ.ಎಲ್‌. (ಸಿಂಧನೂರು ವೃತ್ತ, ರಾಯಚೂರು); ನಾಗರಾಜ ಎಂ. ಕಮ್ಮಾರ (ಸುರಪುರ ಗ್ರಾಮಾಂತರ ವೃತ್ತ (ಹುಣಸಗಿ), ಯಾದಗಿರಿ); ಹನುಮರೆಡ್ಡೆಪ್ಪ (ಶಹಾಪುರ ವೃತ್ತ, ಯಾದಗಿರಿ).

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !