ಬುಧವಾರ, ಡಿಸೆಂಬರ್ 8, 2021
26 °C

ಗಡಿಕೇಶ್ವಾರದಲ್ಲಿ ಮತ್ತೆ ಕಂಪಿಸಿದ ಭೂಮಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಭೂಕಂಪ ಪೀಡಿತ ಗಡಿಕೇಶ್ವಾರ ಗ್ರಾಮದಲ್ಲಿ ಬುಧವಾರ ನಸುಕಿನಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ ಎಂದು ಸ್ಥಳಿಯ ಮುಖಂಡರಾದ ಸಂತೋಷ ಬಳಿ ಮತ್ತು ವೀರೇಶ ಬೆಳಕೇರಿ ತಿಳಿಸಿದ್ದಾರೆ. 

ನಸುಕಿನ 4.31 ಹಾಗೂ 6.52ಕ್ಕೆ ಭೂಮಿಯಿಂದ ಜೋರು ಸದ್ದು ಕೇಳಿಸಿದೆ. ಇದರಿಂದ ಭಯಭೀತರಾದ ಜನ ಮನೆಗಳಿಂದ ಹೊರಗೋಡಿ ಬಂದಿದ್ದಾರೆ.

ಈಗಾಗಲೇ ಸಾವಿರಾರು ಜನ ಗ್ರಾಮ ತೊರೆದಿದ್ದಾರೆ. ಕಂದಾಯ ಸಚಿವರು ಬಂದು ಕೇವಲ ಮನೆ ಗೋಡೆ ಕುಸಿದ 5 ಕುಟುಂಬಗಳಿಗೆ ಮಾತ್ರ ಪರಿಹಾರದ ಚೆಕ್ ವಿತರಿಸಿದರು. ಆದರೆ ಜನರ ಬೇಡಿಕೆಯ ಶೆಡ್ ನಿರ್ಮಾಣದ ಕುರಿತು ಸ್ಪಷ್ಟ ಭರವಸೆ ನೀಡಲಿಲ್ಲ ಎಂಬ ಅಸಮಾಧಾನ ಗ್ರಾಮಸ್ಥರಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು