ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಗಡಿಕೇಶ್ವಾರದಲ್ಲಿ ಮತ್ತೆ ಲಘು ಕಂಪನ‌– ಆತಂಕದಲ್ಲಿ ಜನ

Last Updated 10 ನವೆಂಬರ್ 2021, 11:58 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಭೂಕಂಪನ ಪೀಡಿತ ಗಡಿಕೇಶ್ವಾರ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ಮತ್ತೆ ಲಘು ಕಂಪನ ಸಂಭವಿಸಿದೆ. ಬೆಳಿಗ್ಗೆ 9.55ಕ್ಕೆ‌ ಎರಡು ಬಾರಿ ಭೂಮಿಯಿಂದ ಜೋರು ಸದ್ದು ಬಂದು ಭೂಮಿ ಕಂಪಿಸಿತು ಎಂದು ಗ್ರಾ.ಪಂ‌. ಮಾಜಿ ಅಧ್ಯಕ್ಷ ನಾಗರಾಜ ಚಕ್ರವರ್ತಿ ತಿಳಿಸಿದರು.

ಕಾಳಜಿ ಕೇಂದ್ರ ಸ್ಥಗಿತ: ಗ್ರಾಮದಲ್ಲಿ ತೆರೆದ ಕಾಳಜಿ ಕೇಂದ್ರ ಗ್ರಾಮಸ್ಥರ ಬಹಿಷ್ಕಾರದಿಂದಾಗಿ 3 ದಿನಗಳಿಂದ ಸ್ಥಗಿತಗೊಳಿಸಲಾಗಿದೆ. ನ 8ರಂದು ದೇಶದ ವಿವಿಧ ಭೂವಿಜ್ಞಾನ ಮತ್ತು ಭೂಕಂಪ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಗಡಿಕೇಶ್ವಾರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದರು. ನ.9ರಂದು ಭೂಕಂಪ ತಜ್ಞರು ಕಲಬುರಗಿಯಲ್ಲಿ ಕಾರ್ಯಾಗಾರ ನಡೆಸಿದ್ದಲ್ಲದೇ ಸರ್ಕಾರ ಭೂಕಂಪನದ ಕುರಿತು 5 ದಿನಗಳಲ್ಲಿ ವರದಿ ನೀಡುವುದಾಗಿ ತಿಳಿಸಿದ್ದಾರೆ.

ಗಡಿಕೇಶ್ವಾರ ಸೇರಿದಂತೆ ರಾಜ್ಯದ ವಿವಿಧೆಡೆ ನಿರಂತರ ಭೂಕಂಪನ ಸಂಭವಿಸುತ್ತಿರುವುದರಿಂದ ಇನ್ನೂ ಹೆಚ್ಚಿನ ಅಧ್ಯಯನದ ಅವಶ್ಯಕತೆ ಮನಗಂಡು ಉನ್ನತ ಮಟ್ಟದ ಭೂವಿಜ್ಞಾನಿಗಳಿಂದ ಅಧ್ಯಯನ ನಡೆಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT