ಭಾನುವಾರ, ನವೆಂಬರ್ 28, 2021
21 °C
ಚಿಂಚೋಳಿ: ಭೂಕಂಪ ಪೀಡಿತ ಗಡಿಕೇಶ್ವಾರ ಗ್ರಾಮ

dnp ಭೂಕಂಪ ತಜ್ಞರ ತಂಡ ಗಡಿಕೇಶ್ವಾರ ಗ್ರಾಮಕ್ಕೆ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ಭೂಕಂಪ ಪೀಡಿತ ಗಡಿಕೇಶ್ವಾರ ಗ್ರಾಮಕ್ಕೆ ಭೂಕಂಪ ತಜ್ಞರು ಇದೇ 8ರಂದು ಸೋಮವಾರ ಬೆಳಿಗ್ಗೆ 10.30ಕ್ಕೆ ಭೇಟಿ ನೀಡುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ತಹಶೀಲ್ದಾರ್ ಅಂಜುಮ್ ತಬಸ್ಸುಮ್, ಭೂಕಂಪ ತಜ್ಞರ ಎರಡು ತಂಡಗಳು ರಾಜ್ಯಕ್ಕೆ ಬರಲಿವೆ. ಒಂದು ತಂಡ ವಿಜಯಪುರ ಹಾಗೂ ಇನ್ನೊಂದು ತಂಡ ಕಲಬುರಗಿ, ಬೀದರ್ ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದೆ ಎಂದರು.

ಕಲಬುರಗಿ ತಂಡವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಆಯುಕ್ತ ಡಾ. ಮನೋಜ ರಾಜನ್ ನೇತೃತ್ವದಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಭೂಭೌತಿಕ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಶಶಿಧರ, ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಸಂ (ಎನ್‌ಐಆರ್‌ಎಂ) ಸಂಸ್ಥೆಯ ಸಿಸ್ಮಾಲಜಿ ವಿಭಾಗದ ತಾಂತ್ರಿಕ ಮುಖ್ಯಸ್ಥ ಡಾ. ಬಾಲಸುಬ್ರಹ್ಮಣ್ಯಂ, ಬೆಂಗಳೂರಿನ ಸಿಎಸ್‌ಐಆರ್ ಸಂಸ್ಥೆಯ ಡಾ.ಚಿರಂಜೀವಿ ಜಿ ವಿವೇಕ, ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ)ನ ಲ್ಯಾಂಡ್‌ಸ್ಲೈಡ್‌ ಡಿವಿಜನ್ ಡೈರೆಕ್ಟರ್ ಆರ್. ಸಂಜೀವ, ನ್ಯಾಷನಲ್ ಸೆಂಟರ್ ಆಫ್ ಸಿಸ್ಮಾಲಜಿ ಸಂಸ್ಥೆಯ ವಿಜ್ಞಾನಿ ಡಾ. ಎ.ಪಿ. ಸಿಂಗ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಬೆಂಗಳೂರಿನ ಉಪ ನಿರ್ದೇಶಕ (ಯೋಜನೆ) ಹರೀಶ ಎಚ್‌ಪಿ, ಕಡಗಂ ಚಿಯ ಕೇಂದ್ರೀಯ ವಿಶ್ವ ವಿದ್ಯಾಲಯದ ಭೂವಿಜ್ಞಾನ ವಿಭಾ ಗದ ಹಿರಿಯ ಸಹಾ ಯಕ ಪ್ರಾಧ್ಯಾಪಕ ಪ್ರೊ. ಲಿಂಗದೇವರು, ಮೈಸೂರು ವಿ.ವಿ.ಯ ಭೂವಿಜ್ಞಾನ ವಿಭಾಗದ ಅತಿಥಿ ಬೋಧಕರಾದ ದರ್ಶನ ಎಂ.ಎಸ್, ಸಿದ್ದರಾಜು ಕೆ. ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಹಿರಿಯ ಭೂಕಂಪ ವಿಜ್ಞಾನಿಗಳಾದ ಎಸ್. ಜಗದೀಶ, ಅಭಿನಯ, ಎಸ್.ಇಮಿಲಿ ಪ್ರಭಾ ಜೋಶಿ, ಅಣವೀರಪ್ಪ ಬಿರಾದಾರ ಬಂದು ಗಡಿಕೇಶ್ವಾರದಲ್ಲಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಕಲಬುರಗಿ ಜಿಲ್ಲೆಗೆ ನಿಯೋಜಿತವಾದ ತಂಡ ಕಾಳಗಿ, ಗಡಿಕೇಶ್ವಾರ, ಕೊರವಿ ತಾಂಡಾ, ಕಾಳಗಿ ಮೂಲಕ ಶಮತಾಬಾದ್, ಬೀದರ್‌ಗೆ ಭೇಟಿ ನೀಡಲಿದೆ. ನ 9ರಂದು ಕಲಬುರಗಿ ನಗರದಲ್ಲಿ ರಾಷ್ಟ್ರಮಟ್ಟದ ಕಾರ್ಯಾಗಾರ ನಡೆಯಲಿದೆ. ಎರಡೂ ತಂಡಗಳು ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗೆ ಭೇಟಿ ನೀಡಿ ಪಡೆದ ಮಾಹಿತಿ ವಿನಿಮಯ ಜತೆಗೆ ತಮ್ಮ ವಿಷಯವನ್ನು ಮಂಡಿಸುವರು ಎಂದು ತಹಶೀಲ್ದಾರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.