ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ರಸ್ತೆಯಲ್ಲೇ ಊಟ ಮಾಡಿ ಪ್ರತಿಭಟನೆ

ಉದ್ಯೋಗ ಖಾತ್ರಿ ಕೆಲಸಕ್ಕಾಗಿ ತಾ.ಪಂ ಕಚೇರಿ ಎದುರು ಭಾರತ ಮುಕ್ತಿ ಮೋರ್ಚಾ ಧರಣಿ
Last Updated 2 ಜುಲೈ 2022, 4:15 IST
ಅಕ್ಷರ ಗಾತ್ರ

ಚಿಂಚೋಳಿ: ಉದ್ಯೋಗ ಖಾತ್ರಿ ಕಾರ್ಮಿಕರಿಗೆ ದುಡಿಯಲು ಕೆಲಸಕೊಡಿ ಎಂದು ಒತ್ತಾಯಿಸಿ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಭಾರತ ಮುಕ್ತಿ ಮೋರ್ಚಾ ಕಾರ್ಯಕರ್ತರು ರಸ್ತೆಯಲ್ಲಿಯೇ ಕುಳಿತು ರೊಟ್ಟಿಗಂಟು ಬಿಚ್ಚಿ ಸಹಭೋಜನ ನಡೆಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಗಾರಂಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂಡದಳ್ಳಿ ಕಾರ್ಮಿಕರು ಕಳೆದ ಮೂರು ವಾರದಿಂದ ತಮಗೆ ಕೆಲಸ ಕೊಡಿ ಎಂದು ಬೇಡಿದರೂ ಕೆಲಸ ಕೊಡುತ್ತಿಲ್ಲ. ಎಲ್ಲಾ ಕಾರ್ಮಿಕರಿಗೆ ದುಡಿಯಲು ಕೆಲಸ ಕೊಡಬೇಕು. ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದಲ್ಲಿ ಅಂಬೇಡ್ಕರ್ ಭವನ ದುರಸ್ತಿಗೆ ಸರ್ಕಾರ ಹಣ ಮಂಜೂರು ಮಾಡಿದರೂ ಗ್ರಾ.ಪಂ ದುರಸ್ತಿ ಕೈಗೊಳ್ಳುತ್ತಿಲ್ಲ. ಪಿಡಿಒ ಹಾಗೂ ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೂಡದಳ್ಳಿ ಮತ್ತು ಕಲ್ಲೂರು ರೋಡ್ ಗ್ರಾಮದಲ್ಲಿ ಮಹಿಳೆಯರಿಗೆ ಶೌಚಾಲಯ ನಿರ್ಮಿಸಿಕೊಡಬೇಕು, ಗಾರಂಪಳ್ಳಿ ಗ್ರಾಮದ ಮರಪಳ್ಳಿ ರಸ್ತೆಯಿಂದ ಜೈಭೀಮ ನಗರಕ್ಕೆ ಹೋಗುವ ಮಧ್ಯೆ ಬ್ರಿಜ್ ಕಂ ಬ್ಯಾರೇಜು ನಿರ್ಮಿಸಬೇಕು, ತಾಲ್ಲೂಕಿನಲ್ಲಿ ಸುಲೇಪೇಟ ಮತ್ತು ಚಿಂಚೋಳಿ ಸುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳ ಅನುಕೂಲಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು, ಸುಲೇಪೇಟ ರುಮ್ಮನಗೂಡ ಮಾರ್ಗದಲ್ಲಿ ಸಂಚರಿಸುವ ಹುಮನಾಬಾದ ಘಟಕದ ಬಸ್ ಮಧ್ಯಾಹ್ನ 3.30ಕ್ಕೆ ಸುಲೇಪೇಟದಿಂದ ರುಮ್ಮನಗೂಡ ಮಾರ್ಗವಾಗಿ ತೆರಳುತ್ತದೆ ಇದನ್ನು 4.30ಕ್ಕೆ ಸುಲೇಪೇಟದಿಂದ ತೆರಳುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.‌

ಪ್ರತಿಭಟನೆಯಲ್ಲಿ ಭಾರತ ಮುಕ್ತಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಾರುತಿ ಗಂಜಗಿರಿ, ಗೋಪಾಲ ಗಾರಂಪಳ್ಳಿ, ಓಂ ಪ್ರಸಾದ, ಅಶೋಕ ಕಲ್ಲೂರು, ಬಾಲಪ್ಪ ಮೇತ್ರಿ, ವಿಜಯಕುಮಾರ ಮೇತ್ರಿ, ಗೌತಮ ಭೂರಪಳ್ಳಿ, ಸರ್ವೊದಯ ಗಡ್ಡಿಮನಿ, ಸುಭಾಷ ಹೂಡದಳ್ಳಿ, ಸುಭಾಷ ತಾಡಪಳ್ಳಿ, ಮೌನೇಶ ಗಾರಂಪಳ್ಳಿ ಹಾಗೂ ಸಂಗೀತಾ. ಕಾಶಮ್ಮ, ಶಾಂತಮ್ಮ, ಮಲ್ಲಮ್ಮ, ನರಸಮ್ಮ, ತುಕ್ಕಮ್ಮ, ಸುಬ್ಬಮ್ಮ ಇದ್ದರು.

ಗ್ರೇಡ್-2 ತಹಶೀಲ್ದಾರ್‌ ವೆಂಕಟೇಶ ದುಗ್ಗನ್ ಹಾಗೂ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ನಾಗೇಂದ್ರ ಬೆಡಕಪಳ್ಳಿ ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT