ಜೇವರ್ಗಿ: ‘ಶಿಕ್ಷಣದಿಂದ ಮಾತ್ರ ಸಮಾಜ ಹಾಗೂ ದೇಶದ ಅಭಿವದ್ಧಿ ಸಾಧ್ಯ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ರಾಜಶೇಖರ ಸಾಹು ಸೀರಿ ಹೇಳಿದರು.

ಪಟ್ಟಣದ ಸೇಂಟ್ ಜಾನ್ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಶಿಕ್ಷಣದಿಂದಲೇ ದೇಶದ ಭವಿಷ್ಯ ರೂಪುಗೊಳ್ಳಲು ಸಾಧ್ಯ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕನಸಿನಂತೆ ದೇಶ ಸಾಮಾಜಿಕ, ರಾಜಕೀಯ, ಆರ್ಥಿಕ ಬೆಳವಣಿಗೆಗೆ ಶಿಕ್ಷಣ ಪೂರಕವಾಗಿದೆ’ ಎಂದರು.

ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಲವಂತ್ರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಭಾರತಿ ಪಾಟೀಲ ನೇತೃತ್ವ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಸಾಪ ಅಧ್ಯಕ್ಷ ಎಸ್.ಕೆ.ಬಿರಾದಾರ, ಪ್ರಗತಿಪರ ಚಿಂತಕ ಭಗವಂತ್ರಾಯ ಬೆಣ್ಣೂರ, ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಚಾರ ಸಮಿತಿ ಸದಸ್ಯ ನಿಜಲಿಂಗಪ್ಪ ಮಾನವಿ, ಕರವೇ ಮುಖಂಡ ಬಿ.ಎಚ್.ಮಾಲಿಪಾಟೀಲ, ಟಿಪ್ಪು ಸುಲ್ತಾನ ಕಮಿಟಿ ಅಧ್ಯಕ್ಷ ಮೋಯಿಯುದ್ದೀನ್ ಇನಾಮದಾರ, ನಿಂಗಣ್ಣ ರದ್ದೇವಾಡಗಿ, ಶಂಕರಗೌಡ ಪಾಟೀಲ, ದೊಡ್ಡೇಶ ಕೊಂಬಿನ್, ಮೈಲಾರಿ ಗುಡೂರ, ಮಹಾಂತೇಶ ಪವಾರ, ರಾಜಶೇಖರ ಹಿರೇಮಠ, ಪತ್ರಕರ್ತರಾದ ಮರೆಪ್ಪ ಬೇಗಾರ, ಸುರೇಶ ಹಿರೇಮಠ ಆಗಮಿಸಿದ್ದರು.

ಮುಖ್ಯ ಶಿಕ್ಷಕಿ ಸುಧಾ ಬೆಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಂತೋಷ ದೊಡ್ಡಮನಿ ಸ್ವಾಗತಿಸಿದರು. ಶ್ರೀದೇವಿ ಸಗರ, ಶ್ರೇಯಸ್ ಬೆಣ್ಣೂರ ನಿರೂಪಿಸಿದರು. ಸಿಮ್ರಾನ್ ಬಾಗವಾನ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.