ಎಸ್‌ಬಿಆರ್‌ನಿಂದ ಶಿಕ್ಷಣ ಕ್ರಾಂತಿ

5
ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲ್‌ಕುಮಾರ್ ಬಿಡವೆ

ಎಸ್‌ಬಿಆರ್‌ನಿಂದ ಶಿಕ್ಷಣ ಕ್ರಾಂತಿ

Published:
Updated:
Deccan Herald

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶರಣಬಸವೇಶ್ವರ ಸಂಸ್ಥಾನ ಮಹತ್ತರ ಕೊಡುಗೆ ನೀಡಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲ್‌ಕುಮಾರ್ ಬಿಡವೆ ಹೇಳಿದರು.

ನಗರದ ಶರಣಬಸವೇಶ್ವರ ಶತಮಾನೋತ್ಸವ ಸಭಾಂಗಣದಲ್ಲಿ ಶರಣಬಸವ ವಿಶ್ವವಿದ್ಯಾಲಯದಿಂದ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವೇಶ್ವರರು ಭಕ್ತಿ ಭಂಡಾರಿ, ಶರಣಬಸವೇಶ್ವರರು ದಾಸೋಹ ಭಂಡಾರಿಯಾಗಿದರೆ ಶರಣಬಸವಪ್ಪ ಅಪ್ಪ ಅವರು ಶಿಕ್ಷಣದ ಭಂಡಾರಿಯಾಗಿದ್ದಾರೆ. ಕಲಬುರ್ಗಿ ನಗರಕ್ಕೆ ಅಂತರರಾಷ್ಟ್ರೀಯ ಮನ್ನಣೆ ನೀಡುವಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಅಪಾರ ಪ್ರಮಾಣದ ಶ್ರಮ ವಿನಿಯೋಗಿಸಿದೆ. ಇಂದು ಜಗತ್ತಿನ ಯಾವ ಮೂಲೆಗೆ ಹೋದರೂ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಕಲಿತ ವಿದ್ಯಾರ್ಥಿಗಳು ಸಿಗುತ್ತಾರೆ. ಇದು ಸಂಸ್ಥೆಯ ಗುಣಮಟ್ಟವನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಶರಣಬಸವೇಶ್ವರರು ಮತ್ತು ಖಾಜಾ ಬಂದಾ ನವಾಜ್ ಈ ನೆಲದ ಎರಡು ಕಣ್ಣುಗಳಿದ್ದಂತೆ. ಈ ಭಾಗದಲ್ಲಿ ಭಾವೈಕ್ಯತೆಯ ಹರಿಕಾರರಾಗಿ ಸಹಬಾಳ್ವೆಯ ಪ್ರತೀಕವಾಗಿ ಇಬ್ಬರೂ ಕಂಗೊಳಿಸುತ್ತಾರೆ. ಹೀಗಾಗಿ ಯುವ ಸಮೂಹ ಅವರಿಬ್ಬರನ್ನು ಅನುಸರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಶರಣಬಸವೇಶ್ವರರು ಸಕಲ ಜೀವಿಗಳಿಗೂ ಲೇಸನ್ನು ಬಯಸಿದವರು. ಪಶು, ಪಕ್ಷಿ, ಕ್ರಿಮಿ ಕೀಟಗಳನ್ನು ಮಾನವೀಯತೆಯಿಂದ ಕಂಡವರು. ದಾಸೋಹಕ್ಕೆ ಪ್ರತಿರೂಪವಾಗಿ ಇಂದಿಗೂ ದಾಸೋಹ ಮಹಾಮನೆಯಲ್ಲಿ ಪ್ರತಿನಿತ್ಯ ಅನ್ನ ದಾಸೋಹ ನಡೆಯುತ್ತಿದೆ. ಅದರ ಮುಂದುವರೆದ ಭಾಗವಾಗಿ ಶಿಕ್ಷಣ ದಾಸೋಹನ್ನು ಸಂಸ್ಥಾನದ ವಿವಿಧ ಶಾಲಾ ಕಾಲೇಜುಗಳಲ್ಲಿ ನೀಡಲಾಗುತ್ತಿದೆ ಎಂದು ನುಡಿದರು.

ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸುವ ಮೂಲಕ ಆರಂಭವಾದ ಶಿಕ್ಷಣದ ಕಾರ್ಯ ಇಂದು ವಿಶ್ವವಿದ್ಯಾಲಯವಾಗುವ ಮಟ್ಟಿಗೆ ಬೆಳೆದು ಬಂದಿದೆ. ಇದರ ಹಿಂದೆ ಈ ಹಿಂದಿನ ಪೀಠಾಧಿಪತಿಗಳ ಮತ್ತು ಪ್ರಸ್ತುತ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ಸಾಮಾಜಿಕ ಕಳಕಳಿ ಅಡಗಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಆಶಯದಿಂದ ಲಿಂ.ದೊಡ್ಡಪ್ಪ ಅಪ್ಪ ಅವರು ಮಹಾದೇವಿ ಕನ್ಯಾ ಶಾಲೆ ಆರಂಭಿಸಿ ಮಹಿಳಾ ಶಿಕ್ಷಣಕ್ಕೆ ನಾಂದಿ ಹಾಡಿದ್ದಾರೆ ಎಂದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !