ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಣಗಾರ ಸಮಾಜದ ಬೇಡಿಕೆ ಈಡೇರಿಕೆಗೆ ಪ್ರಯತ್ನ: ಶಾಸಕ ಅಲ್ಲಮಪ್ರಭು ಪಾಟೀಲ

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಭರವಸೆ
Published : 9 ಸೆಪ್ಟೆಂಬರ್ 2024, 15:29 IST
Last Updated : 9 ಸೆಪ್ಟೆಂಬರ್ 2024, 15:29 IST
ಫಾಲೋ ಮಾಡಿ
Comments

ಕಲಬುರಗಿ: ‘ಬಣಗಾರ ಸಮಾಜವನ್ನು ಹಿಂದುಳಿದ ವರ್ಗಗಳ ಪ್ರವರ್ಗ–2ಎಗೆ ಸೇರಿಸುವುದು, ಸಮುದಾಯ ಭವನ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸಲಾಗುವುದು’ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ನಗರದ ಮಕ್ತಂಪುರದ ಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಭಾನುವಾರ ನಡೆದ ಗುಡ್ಡಾಪುರ ವರದಾನೇಶ್ವರಿ ಪುರಾಣ ಪ್ರವಚನ ಮಹಾಮಂಗಳ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ‘ರುದ್ರಭೂಮಿ ಮಂಜೂರು ಮಾಡಿಸುವಂತೆ ಮನವಿ ಮಾಡಲಾಗಿದೆ. ಈ ಬಗ್ಗೆಯೂ ಚರ್ಚಿಸಲಾಗುವುದು’ ಎಂದರು.

ಸಾನ್ನಿಧ್ಯ ವಹಿಸಿದ್ದ ಮಕ್ತಂಪುರ ಬೃಹನ್ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಶ್ರಾವಣ ಪವಿತ್ರವಾದ ತಿಂಗಳು. ಸಾಂಸಾರಿಕ ಜಂಜಡದಿಂದ ಮುಕ್ತರಾಗಿ ದೇವರ ನಾಮಸ್ಮರಣೆ ಮಾಡುವ ಮಾಸವಾಗಿದೆ. ಸಮಾಜ ಬೆಳೆಯಲು ಧರ್ಮಾಚರಣೆ ಮಾಡಬೇಕು’ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಬಣಗಾರ ಸಮಾಜದ ಕೊಡುಗೆ ಅಪಾರ. ಸರ್ಕಾರದ ನೆರವಿಲ್ಲದೆ ಸಮಾಜ ಹಾಗೂ ದೇವಸ್ಥಾನದ ಅಭಿವೃದ್ಧಿಗೆ ಸಮಾಜದ ಹಿರಿಯರು ಹಾಗೂ ಬಾಂಧವರು ಶ್ರಮಿಸಿರುವುದು ಶ್ಲಾಘನೀಯ’ ಎಂದರು.

ಇದೇ ವೇಳೆ ಸಮಾಜದ ದಾನಿಗಳನ್ನು ಸತ್ಕರಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಬಣಗಾರ ಸಮಾಜ ಸಂಘದ ಅಧ್ಯಕ್ಷ ಶಾಂತಪ್ಪ ಘೂಳಿ ಅಧ್ಯಕ್ಷತೆ ವಹಿಸಿದ್ದರು. ಗದ್ದುಗೆ ಮಠದ ಚರಲಿಂಗ ಸ್ವಾಮೀಜಿ, ಮಹಾನಗರ ಪಾಲಿಕೆ ಸದಸ್ಯರಾದ ವಿಜಯಕುಮಾರ ಸೇವಲಾನಿ, ಅಪ್ಪು ಕಣಿಕಿ, ಜಡೆಶಂಕರಲಿಂಗ ದೇವಸ್ಥಾನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಧನಶೆಟ್ಟಿ, ಬಣಗಾರ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ ಉಡಚಣ, ನಾಗೇಶ ಹಂಪಾಗೋಳ್, ಬಸವರಾಜ ಕಮರಡಗಿ, ನಾಗೇಂದ್ರ ಕಲ್ಯಾಣಿ, ರಾಜು ಬೈರಾಮಡಗಿ, ಸಂತೋಷ ನಂದಿ, ರಾಜು ಕಲ್ಯಾಣಿ, ಮಲ್ಲಿಕಾರ್ಜುನ ದೊಡಕುಂಡಿ, ಪ್ರವೀಣ ನಂದಿ, ಬಸವರಾಜ ಮುಗಳಿ, ರವೀಂದ್ರ ಕಾಳಗಿ ಹಾಜರಿದ್ದರು.

ಜಡೆಶಂಕರಲಿಂಗ ದೇವಸ್ಥಾನ ಟ್ರಸ್ಟ್‌ ಅಧ್ಯಕ್ಷ ಆನಂದ ದಂಡೋತಿ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT