ಹಳೆ ಪಿಂಚಣಿ ಜಾರಿಗೆ ಆಗ್ರಹ; ನೌಕರರಿಂದ ಪ್ರತಿಭಟನಾ ರ್‍ಯಾಲಿ

7

ಹಳೆ ಪಿಂಚಣಿ ಜಾರಿಗೆ ಆಗ್ರಹ; ನೌಕರರಿಂದ ಪ್ರತಿಭಟನಾ ರ್‍ಯಾಲಿ

Published:
Updated:
Deccan Herald

ಕಲಬುರ್ಗಿ: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ (ಒಪಿಎಸ್)ಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ತಾಲ್ಲೂಕು ಸಮಿತಿ (ದಕ್ಷಿಣ ವಲಯ) ಸದಸ್ಯರು ನಗರದಲ್ಲಿ ಬುಧವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಜಗತ್ ವೃತ್ತದಿಂದ ರ್‍ಯಾಲಿ ಹೊರಟು ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿಪತ್ರ ಸಲ್ಲಿಸಿದರು.

‘ರಕ್ತ ಕೊಟ್ಟೇವು; ಪಿಂಚಣಿ ಬಿಡೆವು’, ‘ಎನ್‌ಪಿಎಸ್ ಯೋಜನೆ ರದ್ದಾಗಲಿ, ಒಪಿಎಸ್‌ ಯೋಜನೆ ಮರು ಜಾರಿಯಾಗಲಿ’, ‘ಎನ್‌ಪಿಎಸ್ ಹಟಾವೋ, ನೌಕರ್ ಬಚಾವೋ’, ‘ಒಂದು ರಾಜ್ಯ, ಒಂದು ಪಿಂಚಣಿ; ರಕ್ತ ಪಡೆಯಿರಿ, ಒಪಿಎಸ್ ನೀಡಿರಿ’ ಎಂಬ ಘೋಷಣಾ ಫಲಕಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎನ್‌ಪಿಎಸ್ ಯೋಜನೆಯನ್ನು ರದ್ದುಗೊಳಿಸಬೇಕು. ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದಾದ ಬಳಿಕ ತಾಲ್ಲೂಕು ಪಂಚಾಯಿತಿ ಮುಂಭಾಗದಲ್ಲಿ 200ಕ್ಕೂ ನೌಕರರು ರಕ್ತದಾನ ಮಾಡಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಚಂದ್ರಕಾಂತ ಪಿ.ತಳವಾರ, ರಾಜ್ಯ ಸಹ ಕಾರ್ಯದರ್ಶಿ ಧರ್ಮರಾಜ ಜವಳಿ, ತಾಲ್ಲೂಕು ಘಟಕದ ಅಧ್ಯಕ್ಷ ನವನಾಥ ಶಿಂಧೆ, ಉಪಾಧ್ಯಕ್ಷ ನಾಗನಾಥ ಜಿ.ಭೋಸಲೆ, ಕಾರ್ಯದರ್ಶಿ ಜಗದೀಶ ಮೂಲಗೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !