‘ಕಣ್ಣಿನ ಆರೋಗ್ಯ; ಕಾಳಜಿ ವಹಿಸಿ’

7

‘ಕಣ್ಣಿನ ಆರೋಗ್ಯ; ಕಾಳಜಿ ವಹಿಸಿ’

Published:
Updated:
Prajavani

ಕಲಬುರ್ಗಿ: ‘ಪಂಚೇಂದ್ರಿಯಗಳಲ್ಲಿ ಕಣ್ಣು ಬಹಳ ಮುಖ್ಯ. ಕಣ್ಣಿನ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು’ ಎಂದು ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ನಿವೇದಿತಾ ಸ್ವಾಮಿ ಹೇಳಿದರು.

ನಗರದ ಬಿದ್ದಾಪುರ ಕಾಲೊನಿಯ ಅಕ್ಕಮಹಾದೇವಿ ಆಶ್ರಮದಲ್ಲಿ ಭೋರುಕಾ ನೇತ್ರಾಲಯ ಮತ್ತು ಅನುಗ್ರಹ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಶಿಬಿರದಲ್ಲಿ 75ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆ ಮಾಡಲಾಯಿತು.

ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಶ್ರೀ ಮತ್ತಿಮೂಡ ಉದ್ಘಾಟಿಸಿದರು.

ಬಿದನೂರ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ವಿ.ಪಾಟೀಲ, ಅಂಬಾರಾಯ ಎನ್.ಕೆ. ಚಲಗೇರಾ, ಡಾ. ಬಾಬು ಜಗಜೀವನರಾಮ ಹೋರಾಟ ಸಮಿತಿ ರಾಜ್ಯ ಘಟದಕ ಅಧ್ಯಕ್ಷ ಬಿ.ಎಂ.ರಾವೂರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !