ಶುಕ್ರವಾರ, ಜೂನ್ 5, 2020
27 °C
’ಜ್ಯೋತಿ’ ಪರಿವಾರದಲ್ಲಿ ನಾಲ್ಕು ತಲೆಮಾರಿನ ಜನರು

ದಸ್ತಾಪುರದ ಅವಿಭಕ್ತ ಕುಟುಂಬದಲ್ಲಿ 56 ಜನ...

ಜಗನ್ನಾಥ ಡಿ. ಶೇರಿಕಾರ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ದಸ್ತಾಪುರ ಗ್ರಾಮದಲ್ಲಿ ನಾಲ್ಕು ತಲೆಮಾರಿನವರು ಇರುವ ಅವಿಭಕ್ತ ಕುಟುಂಬವೊಂದಿದೆ.

ಇಲ್ಲಿನ ಚಂದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗವು ನಡೆಸಿದ ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ಈ ಕುಟುಂಬ ಪತ್ತೆಯಾಗಿದೆ. ಕುಟುಂಬದ ಯಜಮಾನ ಶಿವರಾಯ ಜ್ಯೋತಿ ಅವರಿಗೆ 82 ವರ್ಷ. ಅವರ ಪತ್ನಿ ಮರೆಮ್ಮ ಅವರಿಗರ 72 ವರ್ಷ.

ಈ ದಂಪತಿಗೆ ಮೂವರು ಹೆಣ್ಣು, ಏಳು ಗಂಡು ಮಕ್ಕಳು ಇದ್ದಾರೆ. ಒಬ್ಬಳು ಮಗಳು ಚಂದಮ್ಮ ಮತ್ತು ಎಲ್ಲ ಏಳು ಗಂಡು ಮಕ್ಕಳು ಒಟ್ಟಿಗೆ ಇದ್ದಾರೆ. ಈ ಕುಟುಂಬದಲ್ಲಿ ಸದ್ಯ 56 ಮಂದಿ ಇದ್ದಾರೆ. ಒಟ್ಟು 23 ಹೆಣ್ಣು ಮಕ್ಕಳು ಇಲ್ಲಿದ್ದಾರೆ.

ಒಂದೇ ಕಡೆ ಅಡುಗೆ ಮಾಡುವುದು ಮತ್ತು ಒಂದೇ ಕಡೆ ಊಟ ಮಾಡುವುದು ಈ ಕುಟುಂಬದ ವಿಶೇಷತೆಗಳಲ್ಲೊಂದಾಗಿದೆ. 3.03 ಗುಂಟೆ ಜಮೀನು ಪಿತ್ರಾರ್ಜಿವಾಗಿ ಬಂದಿದ್ದು ಶಿವರಾಯ ಜ್ಯೋತಿ ಅವರು ತಮ್ಮ ಹಾಗೂ ಮಕ್ಕಳ ದುಡಿಮೆಯಿಂದ 25 ಎಕರೆ ಜಮೀನು ಖರೀದಿಸಿದ್ದಾರೆ.

ಈ ಕುಟುಂಬದ ಮುಖ್ಯ ಉದ್ಯೋಗ ಒಕ್ಕಲುತನ. ಈ ಕುಟುಂಬದ ಇಬ್ಬರು ಗ್ರಾಮ ಪಂಚಾಯಿತಿಯಲ್ಲಿ ಮತ್ತು ಒಬ್ಬರು ಆರೋಗ್ಯ ಇಲಾಖೆಯಲ್ಲಿ ದಿನಗೂಲಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕುಟುಂಬದ ಅಗತ್ಯಗಳನ್ನು ಪೂರೈಸಲು ಎಲ್ಲರಿಗೂ ಒಟ್ಟಿಗೆ ಖರೀದಿಸಲಾಗುತ್ತದೆ. ಬಟ್ಟೆಬರೆ ಹಾಗೂ ಚಪ್ಪಲಿ ಎಲ್ಲವೂ ಒಮ್ಮೆಗೆ ತಂದು  ನೀಡಲಾಗುತ್ತದೆ. ಈ ಕುಟುಂಬ ಪರಸ್ಪರ ವಿಶ್ವಾಸ ಮತ್ತು ನಂಬಿಕೆಯಿಂದ ಒಟ್ಟಾಗಿ ಸಾಗುತ್ತಿದೆ.‘ನಮ್ಮ ಕುಟುಂಬದವರಿಗೆ ದುಡಿಮೆಯಲ್ಲಿ ನಂಬಿಕೆ. ಒಟ್ಟಾಗಿ ದುಡಿದು ಸುಖ ಸಂಸಾರ ನಡೆಸುತ್ತಿದ್ದೇವೆ’ ಎನ್ನುತ್ತಾರೆ ಶಿವರಾಯ ಜ್ಯೋತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು