ಕಲಬುರಗಿ: ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ನಿರ್ಮಾಣವಾಗಲಿರುವ ಜಾಗದಲ್ಲಿ ನರೇಗಾ ಯೋಜನೆಯಡಿ ಬೆಳೆಸಿದ್ದ ಮೂರು ಎಕರೆಯಷ್ಟು ಸೀಮೆತಂಗಡಿ ನೆಡುತೋಪನ್ನು ಕಡಿದು ಹಾಕಿದ ಆರೋಪದ ಮೇರೆಗೆ ರೈತ ಶರಣಪ್ಪ ಕೋಣಿನ್ ವಿರುದ್ಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.

2013–14ರಲ್ಲಿ ನರೇಗಾ ಕಾರ್ಮಿಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಹೊನ್ನಕಿರಣಗಿ ಗ್ರಾಮದ ಬಳಿ ಜವಳಿ ಇಲಾಖೆಗೆ ಸೇರಿದ ಭೂಮಿಯಲ್ಲಿ ಸಸಿಗಳನ್ನು ನೆಡಲಾಗಿತ್ತು. ಬೆಳೆದು ದೊಡ್ಡದಾಗಿದ್ದ ಸೀಮೆತಂಗಡಿ ಗಿಡಗಳನ್ನು ನೆಲಸಮ ಮಾಡಿದರೆ ಇನ್ನಷ್ಟು ಭೂಮಿ ತನಗೆ ದಕ್ಕಲಿದೆ ಎಂದು ಭಾವಿಸಿದ ರೈತ ಮೂರು ಎಕರೆಯಲ್ಲಿ ಬೆಳೆದಿದ್ದ ಗಿಡಗಳನ್ನು ಬುಡಸಮೇತ ಜೆಸಿಬಿ ಬಳಸಿ ಕಿತ್ತು ಹಾಕಿಸಿದ್ದ. ಈ ಬಗ್ಗೆ ನರೇಗಾ ಕಾರ್ಮಿಕ ಸದಾಶಿವ ಹೈದ್ರಾ ಅವರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಕುರಿತು ‘ಪ್ರಜಾವಾಣಿ’ ವಿಸ್ತೃತ ವರದಿಯನ್ನೂ ಪ್ರಕಟಿಸಿತ್ತು.

ವರದಿ ಪ್ರಕಟವಾದ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಮರಗಳನ್ನು ಕಿತ್ತು ಹಾಕಲು ಬಳಸಿದ್ದ ಜೆಸಿಬಿ ಯಂತ್ರವನ್ನು ಜಪ್ತಿ ಮಾಡಿದರು. ರೈತನ ವಿಚಾರಣೆ ನಡೆಸಿದ ಅಧಿಕಾರಿಗಳು ಭವಿಷ್ಯದಲ್ಲಿ ಹೀಗೆ ಮಾಡದಂತೆ ತಾಕೀತು ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಕಲಬುರಗಿ ವಲಯ ಅರಣ್ಯಾಧಿಕಾರಿ ಗುರುರಾಜ, ‘ಮೂರು ಎಕರೆಯಲ್ಲಿ ಬೆಳೆದಿದ್ದ ನೆಡುತೋಪುಗಳನ್ನು ನಾಶ ಮಾಡಿದ್ದರ ಕುರಿತು ನಷ್ಟದ ಅಂದಾಜು ಮಾಡಿ ಡಿಸಿಎಫ್ ಅವರಿಗೆ ವರದಿ ಸಲ್ಲಿಸಲಾಗುವುದು. ಅವರು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.