ವಾಡಿ: ಶೇಂಗಾ ಬೆಳೆಗೆ ರಬ್ಬರ್ ಹುಳುಗಳ ಬಾಧೆ ಕಾಣಿಸಿಕೊಂಡಿದ್ದು, ರೈತರು ತತ್ತರಿಸುವಂತೆ ಮಾಡಿದೆ.

ಕಳೆದ ಅಕ್ಟೋಬರ್ ತಿಂಗಳಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಬೆಳೆ ಹೂವುಗಳಿಂದ ತುಂಬಿದ್ದು ಕಾಯಿ ಕಟ್ಟುತ್ತಿದೆ. ಕೀಟಬಾಧೆ ರೈತರ ಚಿಂತೆಗೆ ಕಾರಣವಾಗಿದೆ. ಹುಳುಗಳು ಕೀಟನಾಶಕ ಸಿಂಪಡಿಸಿದರೂ ಹತೋಟಿಗೆ ಬರುತ್ತಿಲ್ಲ. ಹಗಲು ಹೊತ್ತು ಮಣ್ಣಲ್ಲಿ ಸೇರಿ ರಾತ್ರಿ ವೇಳೆ ಬೆಳೆಗಳ ಮೇಲೆ ದಾಳಿ ಮಾಡಿ ಗಿಡಗಳನ್ನು ತಿಂದು ಹಾಕುತ್ತಿವೆ. ರೈತರು ರಾತ್ರಿ ವೇಳೆ ಕೀಟನಾಶಕ ಸಿಂಪಡಣೆ ಮಾಡುತ್ತಿರುವುದು ಕಂಡುಬರುತ್ತಿದೆ.

ನಾಲವಾರ ಭಾಗದ ಕೆಂಪು ಮಸಾರಿ ಜಮೀನಿನಲ್ಲಿ ನೀರಾವರಿ ಆಶ್ರಯದಲ್ಲಿ ಒಟ್ಟು 3,200 ಹೇಕ್ಟರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಮೊದಲು ಒಂದು ಬಾರಿ ಕೀಟನಾಶಕ ಹೊಡೆದರೆ ರಬ್ಬರ್ ಹುಳುಗಳು ಹತೋಟಿಗೆ ಬರುತ್ತಿದ್ದವು. ಆದರೆ ಈ ಬಾರಿ ಮೂರರಿಂದ ನಾಲ್ಕು ಬಾರಿ ಕೀಟನಾಶಕ ಸಿಂಪಡಣೆ ಮಾಡಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ರೈತರ ಅಳಲು.

ಪ್ರತಿ ಸಲ ಸಿಂಪಡಣೆಗೆ ಕನಿಷ್ಠ ₹2 ಸಾವಿರ ಖರ್ಚುಗುತ್ತಿದೆ. ಸಾವಿರಗಟ್ಟಲೇ ಹಣ ಖರ್ಚಾಯಿತೇ ಹೊರತು ಸಮಸ್ಯೆ ತಪ್ಪಲಿಲ್ಲ. ಉತ್ತಮ ಇಳುವರಿಯ ಕನಸು ನುಚ್ಚುನೂರಾಗಿದೆ ಎನ್ನುತ್ತಾರೆ ಬೋಜು ನಾಯಕ ತಾಂಡಾ ರೈತರಾದ ಗೋಪಾಲ ಸೋಮಲ ನಾಯಕ, ಖುಬು ಗಮ್ಮು, ಪೋಮು ಚಂದು.

ನಾಲವಾರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸಹಾಯಕ ಪ್ರಾಧ್ಯಾಪಕ ಉಮೇಶ ಬಾರಿಕರ ಪ್ರಜಾವಾಣಿಯೊಂದಿಗೆ ಮಾತನಾಡಿ,‘ರಬ್ಬರ್ ಹುಳುಗಳ ಹತೋಟಿಗೆ ಎಮಾಮೆಕ್ಟಿನ್ ಬೆಂಜೋಯೇಟ್ 0.5 ಗ್ರಾಂ ಅಥವಾ ಲ್ಯಾಂಬ್ಡಿಕೈಲೋಥ್ರಿನ್ 1.5 ಮಿಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಚನ್ನಾಗಿ ಗಿಡ ತೊಯುವಂತೆ ಸಿಂಪಡಿಸಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.