ಸಿಯುಕೆಯಲ್ಲಿ ಚಲನಚಿತ್ರೋತ್ಸವ ಆರಂಭ

ಶುಕ್ರವಾರ, ಮಾರ್ಚ್ 22, 2019
28 °C

ಸಿಯುಕೆಯಲ್ಲಿ ಚಲನಚಿತ್ರೋತ್ಸವ ಆರಂಭ

Published:
Updated:
Prajavani

ಕಲಬುರ್ಗಿ: ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ವಿಭಾಗದಿಂದ ಆಯೋಜಿಸಿರುವ ‘ಫ್ರೆಮ್ಸ್‌–2019' ಮೂರು ದಿನಗಳ ಚಲನ ಚಿತ್ರೋತ್ಸವಕ್ಕೆ ಕುಲಪತಿ ಪ್ರೊ.ಎಚ್‌.ಎಂ. ಮಹೇಶ್ವರಯ್ಯ ಶುಕ್ರವಾರ ಚಾಲನೆ ನೀಡಿದರು.

ಚಿತ್ರ ನಿರ್ಮಾಪಕ ಹಾಗೂ ಶಿಕ್ಷಣ ತಜ್ಞ ಪ್ರೊ.ಹರಿಹರನ್‌ ಕೃಷ್ಣನ್‌ ಮುಖ್ಯ ಅತಿಥಿಯಾಗಿದ್ದರು. ಸಮ ಕುಲಪತಿ ಪ್ರೊ.ಜಿ.ಆರ್‌. ನಾಯ್ಕ್‌, ಕುಲಸಚಿವ ಪ್ರೊ.ಮುಸ್ತಾಕ್‌ ಅಹ್ಮದ್‌ ಪಟೇಲ್‌, ಡೀನ್‌ ಪ್ರೊ.ಸುನೀತಾ ಅನಿಲ್ ಮಂಜನಬೈಲ್‌, ಇಂಗ್ಲಿಷ್‌ ವಿಭಾಗದ ಮುಖ್ಯಸ್ಥ ಪ್ರೊ.ಎನ್‌.ನಾಗರಾಜು, ಪ್ರೊ.ಬಸವರಾಜ ಡೋಣೂರ, ಸಂಯೋಜಕರಾದ ಡಾ.ಸ್ರೀಬಿತಾ ಇದ್ದರು.

ಈ ಚಲನ ಚಿತ್ರೋತ್ಸವದಲ್ಲಿ ದಿ.ಗಾಡ್‌ಫಾದರ್‌ (ಇಂಗ್ಲಿಷ್‌), ನಾಯಕನ್‌ (ತಮಿಳು), ದಿವಾರ್‌ (ಹಿಂದಿ), 3 ಐರನ್‌ (ಕೋರಿಯನ್‌) ಹಾಗೂ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !