ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಸಿಮೆಂಟ್ ಕ್ಲಿಂಕರ್ ಬೆಲ್ಟ್.ಗೆ ಬೆಂಕಿ: ಆತಂಕ

Last Updated 21 ಫೆಬ್ರುವರಿ 2022, 8:14 IST
ಅಕ್ಷರ ಗಾತ್ರ

ವಾಡಿ (ಕಲಬುರಗಿ ಜಿಲ್ಲೆ): ಪಟ್ಟಣದ ಎಸಿಸಿ ಸಿಮೆಂಟ್ ಕಂಪನಿಯಲ್ಲಿ ಸೋಮವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಯಿತು.

ಸಿಮೆಂಟ್ ಕ್ಲಿಂಕರ್ ಸಾಗಿಸುವ ಬೆಲ್ಟ್‌ಗೆ ಬೆಂಕಿ ಹತ್ತಿದ ಪರಿಣಾಮ ದಟ್ಟ ಹೊಗೆ ಆವರಿಸಿತು.

ಕಲ್ಲು, ಮ್ಯಾಂಗನೀಸ್ ಮಣ್ಣು, ಜಿಪ್ಸಂ, ಕಲ್ಲಿದ್ದಲು, ನೀರು ಮಿಶ್ರಣ ಮಾಡಿ ಸಿಮೆಂಟ್ ಉತ್ಪಾದನಾ ಘಟಕಕ್ಕೆ ಈ ಬೆಲ್ಟ್ ಮೂಲಕ ಸಾಗಿಸಲಾಗುತ್ತದೆ. ಹೀಗೆ ಸಾಗಿಸುವ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಕಾರ್ಖಾನೆ ಮೂಲಗಳು ತಿಳಿಸಿವೆ.

ಏಕಾಏಕಿ ಚಿಮ್ಮಿದ ದಟ್ಟ ಹೊಗೆಯಿಂದ ಪಟ್ಟಣ ಹಾಗೂ ಸುತ್ತಲಿನ ಇಂಗಳಗಿ, ಬಲರಾಮ ಚೌಕ್ ರಾವೂರು ಲಕ್ಷ್ಮಿಪುರ ವಾಡಿ ಕುಂದಾಪುರ ಗ್ರಾಮದ ಜನ ಆತಂಕಕ್ಕೆ ಒಳಗಾದರು.

ಎಸಿಸಿ ಕಂಪನಿಯ ಆಡಳಿತ ವರ್ಗ ಹಾಗೂ ಎಂಜಿನಿಯರುಗಳು, ಅವಘಡ ಸಂಭವಿಸಿದ ಸ್ಥಳದತ್ತ ದೌಡಾಯಿಸಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT