ಕಲಬುರಗಿ: ಶ್ರಾವಣ ಮಾಸದ ಮೊದಲ ಸೋಮವಾರದ ಅಂಗವಾಗಿ ಈ ಭಾಗದ ಆರಾಧ್ಯದೈವ ಶರಣ ಬಸವೇಶ್ವರರ ದೇವಸ್ಥಾನಕ್ಕೆ ನಸುಕಿನಂದಲೇ ಭಕ್ತ ಸಾಗರ ಹರಿದು ಬರುತ್ತಿದೆ.
ಶರಣ ಬಸವೇಶ್ವರರ ದರ್ಶನ ಪಡೆಯಲು ಭಕ್ತರು ನೂರಾರು ಮೀಟರ್ ಉದ್ದದ ಮೂರು ಸಾಲುಗಟ್ಟಿದ್ದಾರೆ.
ಒಂದು ಸಾಲಿನಲ್ಲಿ ನಿಂತವರು ದೇವಸ್ಥಾನದ ಹೊರಗಿನಿಂದಲೇ ಕೈಮುಗಿದು ಭಕ್ತಿ ಅರ್ಪಿಸಿದರೆ, ಮತ್ತೆರಡು ಸಾಲುಗಳಲ್ಲಿ ನಿಂತವರು ದೇವಸ್ಥಾನದ ಒಳಗೆ ಹೋಗಿ ಶರಣ ಬಸವೇಶ್ವರರನ್ನು ಕಣ್ತುಂಬಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನದ ಹೊರಗಿನಿಂದಲೇ ತೆಂಗಿನಕಾಯಿ ಒಡೆದು, ಊದಿನಕಡ್ಡಿ, ಕರ್ಪೂರ ಅರ್ಪಿಸಲು ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಯೂ ಭಕ್ತರ ವ್ಯಾಪಕ ದಟ್ಟಣೆ ಇದೆ.
ದೇವಸ್ಥಾನ ಆವರಣದಲ್ಲಿ ತೆಂಗಿನಕಾಯಿ, ಬಿಲ್ವ ಪತ್ರೆ, ಪುಷ್ಪಗಳು ಮಾರಾಟವೂ ಜೋರಾಗಿದೆ.