ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಬೆಳೆ, ಕೆರೆ, ರಸ್ತೆ ಹಾನಿ ಪರಿಶೀಲನೆ

ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಭೇಟಿ
Last Updated 14 ಡಿಸೆಂಬರ್ 2020, 21:11 IST
ಅಕ್ಷರ ಗಾತ್ರ

ಕಳೆದ ಅಕ್ಟೋಬರ್‌ನಲ್ಲಿ ಸಂಭವಿಸಿದ್ದ ಪ್ರವಾಹ ಪರಿಸ್ಥಿತಿ ಅಧ್ಯಯನವನ್ನು ಸೋಮವಾರ ಕೇಂದ್ರದ ಅಧಿಕಾರಿಗಳ ತಂಡ ಕಲಬುರ್ಗಿ, ಅಫಜಲಪುರ ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ, ಒಡೆದ ಕೆರೆ ಮತ್ತು ಹದಗೆಟ್ಟ ರಸ್ತೆಗಳನ್ನು ಪರಿಶೀಲಿಸಿತು. ಕಳೆದ ಅಕ್ಟೋಬರ್‌ನಲ್ಲಿ ಸಂಭವಿಸಿದ್ದ ಪ್ರವಾಹ ಪರಿಸ್ಥಿತಿ ಅಧ್ಯಯನವನ್ನು ಸೋಮವಾರ ಕೇಂದ್ರದ ಅಧಿಕಾರಿಗಳ ತಂಡ ಕಲಬುರ್ಗಿ, ಅಫಜಲಪುರ ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿ, ಒಡೆದ ಕೆರೆ ಮತ್ತು ಹದಗೆಟ್ಟ ರಸ್ತೆಗಳನ್ನು ಪರಿಶೀಲಿಸಿತು. ರೈತರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ನಷ್ಟದ ವಿವರ ದಾಖಲಿಸಿಕೊಂಡಿತು.

ಕೇಂದ್ರ ಗೃಹ ಸಚಿವಾಲಯದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಂಟಿ ಕಾರ್ಯದರ್ಶಿ ರಮೇಶಕುಮಾರ್ ಘಂಟಾ, ಹಣಕಾಸು ಸಚಿವಾಲಯದ ವೆಚ್ಚ ವಿಭಾಗದ ನಿರ್ದೇಶಕ ಡಾ. ಭರತೇಂದು ಸಿಂಗ್ ಅವರನ್ನು ಒಳಗೊಂಡ ತಂಡಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಜಾ ಪಿ. ಮಾಹಿತಿ ನೀಡಿದರು.

ಅಫಜಲಪುರ ತಾಲ್ಲೂಕಿನ ಬಿದನೂರು ಗ್ರಾಮದಲ್ಲಿ ಕೇಂದ್ರ ತಂಡಕ್ಕೆ ಶಾಸಕ ಎಂ.ವೈ. ಪಾಟೀಲ ಮನವಿ ಸಲ್ಲಿಸಿ, ‘ಭೀಮಾ ನದಿ ಪ್ರವಾಹದಿಂದ ಅತಿ ಹೆಚ್ಚು ನಷ್ಟಕ್ಕೆ ಒಳಗಾದ ಅಫಜಲಪುರ ತಾಲ್ಲೂಕಿನಲ್ಲಿ ಹಲವಾರು ಮನೆಗಳು ನೆಲಕಚ್ಚಿದ್ದು, ರೈತರ ಬೆಳಗಳು ಹಾನಿಯಾಗಿವೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪರಿಷ್ಕರಿಸಿ ಹೆಚ್ಚು ಪರಿಹಾರ ನೀಡಬೇಕು’ ಎಂದರು.
*
ಅತಿವೃಷ್ಟಿಯಿಂದ ರಾಜ್ಯದಲ್ಲಿ ₹ 15,410 ಕೋಟಿ ಹಾನಿಯಾಗಿದ್ದು, ಅದು ನಿಯಮದ ಪ್ರಕಾರ ₹ 1629 ಕೋಟಿ ಆಗಲಿದೆ. ಅಷ್ಟು ಮೊತ್ತ ಕೇಂದ್ರದಿಂದ ಬಿಡುಗಡೆಯಾಗುವ ನಿರೀಕ್ಷೆಯಿದೆ.
-ಮನೋಜ್ ರಾಜನ್, ಆಯುಕ್ತ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT