ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲಾಪುರ | ಪ್ರವಾಹ ಭೀತಿ: ತಹಶೀಲ್ದಾರ್ ಭೇಟಿ

Published 1 ಸೆಪ್ಟೆಂಬರ್ 2024, 15:51 IST
Last Updated 1 ಸೆಪ್ಟೆಂಬರ್ 2024, 15:51 IST
ಅಕ್ಷರ ಗಾತ್ರ

ಕಮಲಾಪುರ: ತಾಲ್ಲೂಕಿನ ದಸ್ತಾಪುರ ಗ್ರಾಮದ ಜನರಿಗೆ ಪ್ರವಾಹ ಭೀತಿ ಕಾಡುತ್ತಿದ್ದು, ತಹಶೀಲ್ದಾರ್‌ ಮೋಸಿನ್‌ ಅಹಮ್ಮದ್‌ ಭಾನುವಾರ ಭೇಟಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು.

‘ಗ್ರಾಮದ ಹಿಂಬದಿಯಲ್ಲಿ ಗಂಡೋರಿ ನಾಲೆ ಮುಂಬದಿಯಲ್ಲಿ ಹಳ್ಳ ಹರಿಯುತ್ತದೆ. ಈ ಎರಡು ಕಡೆಗಳಲ್ಲಿ ಪ್ರವಾಹ ಉಂಟಾಗಿ ಗ್ರಾಮ ನಡುಗಡ್ಡೆಯಂತಾಗುತ್ತದೆ. ಸೇತುವೆ ಮೇಲೆ ಪ್ರವಾಹ ಉಂಟಾಗಿ ಗ್ರಾಮ ಸಂಪೂರ್ಣ ಸಂಪರ್ಕ ಕಡಿತಗೊಳ್ಳುತ್ತದೆ. ಸದ್ಯ ಸೇತುವೆ ಮೇಲೆ ಸ್ವಲ್ಪ ಪ್ರಮಾಣದ ಪ್ರವಾಹ ಉಂಟಾಗಿದೆ ಜನರು ವಾಹನ ತೆರಳಬಹುದಾಗಿದೆ. ಇನ್ನಷ್ಟು ಮಳೆಯಾದರೆ ಹೆಚ್ಚಿನ ಪ್ರಮಾಣಲ್ಲಿ ಪ್ರವಾಹ ಉಂಟಾಗುತ್ತದೆ. ಸಾರ್ವಜನಿಕ ಪ್ರವಾಹ ದಾಟುವ ದುಸ್ಸಾಹಸ ಮಾಡಬಾರದು’ ಎಂದು ತಹಶೀಲ್ದಾರ್ ಮನವಿ ಮಾಡಿದರು.

ಉಪ ತಹಶೀಲ್ದಾರ್ ಶರಣಬಸಪ್ಪ ಜಾಲಳ್ಳಿ, ಕಂದಾಯ ನಿರೀಕ್ಷಕ ರಘುನಂದನ ದ್ಯಾಮಣಿ, ಮಂಜುನಾಥ ಬಿರಾದಾರ ಮತ್ತಿತರರು ಇದ್ದರು.

ಧಾರಾಕಾರ ಮಳೆಗೆ ತೇವಗೊಂಡು ಓಕಳಿ ಗ್ರಾಮದಲ್ಲಿ ಮಹಾದೇವ ಬಸಣ್ಣ ಎಕಲೂರ, ಬೆಳಕೋಟಾ ಗ್ರಾಮದಲ್ಲಿ ಅಶೋಕ ಪಾಂಡುರಂಗ ಕಾಜಳೆ ಹಾಗೂ ಧುತ್ತರಗಾ ಗ್ರಾಮದಲ್ಲಿ ಸೋಮಶೇಖರ ಭೀಮಶಾ ಎಂಬುವವರ ಮನೆ ಗೋಡೆ ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT