ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರಿಗೆ, ಕೂಲಿಕಾರ್ಮಿಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ

Last Updated 29 ಮಾರ್ಚ್ 2020, 14:55 IST
ಅಕ್ಷರ ಗಾತ್ರ

ಅಫಜಲಪುರ: ಕೊರೊನಾ ವೈರಸ್ ನಿರ್ಮೂಲನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳಿಗೆ ಸಾರ್ವಜನಿಕರು ಖೈ ಜೋಡಿಸಬೇಕು ಅಂದಾಗ ಮಾತ್ರ ನಾವು ಯಶಸ್ವಿಯಾಗಿ ಕೊರೊನಾ ವೈರಸ ತಡೆಯಲು ಸಾಧ್ಯವಾಗುತ್ತದೆ ಎಂದು ಅಫಜಲಪುರ ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ ಗುಣಾರಿ ತಿಳಿಸಿದರು.

ಅಫಜಲಪುರದಲ್ಲಿ ಭಾನುವಾರ ಕೊರೊನಾ ನಿರ್ಮೂಲನೆಯಲ್ಲಿ ಕೆಲಸ ಮಾಡುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ಮಧ್ಯಾಹ್ನನದ ಊಟ ಹಾಗೂ ಕುಡಿಯುವ ನೀರು ವಿತರಿಸಿ ಮಾತನಾಡಿದ ಅವರು ಕೊರೊನಾ ವೈರಸ್ ತಡೆಗಟ್ಟಲು ಜೀವನ ಹಂಗು ತೊರೆದು ಪೊಲೀಸ್ ಇಲಾಖೆಯವರು, ವೈದ್ಯರು, ದಾದಿಯರು ಹಾಗೂ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾವು ಕೊರೊನಾ ವೈರಸ್ ತಡೆ ಕಾರ್ಯಕ್ರಮಕ್ಕೆ ಕೈ ಜೋಡಿಸಬೇಕು. ಯಾರು ಮನೆಯಿಂದ ಅನಾವಶ್ಯಕವಾಗಿ ಹೊರಗಡೆ ಬರಕೂಡದು ಎಂದು ಅವರು ತಿಳಿಸಿದರು.

ಉಚಿತವಾಗಿ ನಿರ್ಗತಿಕರಿಗೆ, ಬಡವರಿಗೆ, ಪೌರ ಕಾರ್ಮಿಕರಿಗೆ 300ರಿಂದ 500 ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಜೊತೆಗೆ ಮಜ್ಜಿಗೆ, ನೀರಿನ ವ್ಯವಸ್ಥೆ ಮಾಡಿ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಅಶೋಕ ಬಗಲಿ, ಮಲ್ಲಿಕಾರ್ಜುನ ನಿಂಗದಳ್ಳಿ, ಗಂಗಾಧರ ಶ್ರೀಗಿರಿ, ಚಿದಾನಂದ ಮಠ, ಮಳೇಂದ್ರ ಡಾಂಗೆ, ಬಸವರಾಜ ವಾಳಿ, ಪಾಶಾ ಮಣ್ಣುರ, ರಾಚಯ್ಯ ಮಠ, ಶ್ರೀಶೈಲ ಬಳೂರ್ಗಿ, ಅಪ್ಪಾಶಾ ಬುರಲಿ, ತನವೀರ ಮಣ್ಣೂರ, ಶರಣು ಪದಕಿ, ಸುನಿಲ ಶೆಟ್ಟಿ, ಭಿಮರಾವ್ ಕಲಶೆಟ್ಟಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT