ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಸ್ವಾತಂತ್ರ್ಯ ಹೋರಾಟಗಾರ ಗೋಪಾಲದೇವ ಜಾಧವ 39ನೇ ಪುಣ್ಯಸ್ಮರಣೆ

Last Updated 25 ಜನವರಿ 2023, 7:11 IST
ಅಕ್ಷರ ಗಾತ್ರ

ಕಾಳಗಿ: ‘ಬೆಡಸೂರ ಎಂ. ತಾಂಡಾದ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣಪ್ರೇಮಿ ದಿ.ಗೋಪಾಲದೇವ ಜಾಧವ ಅವರು ಬಂಜಾರ ಜನಾಂಗದ ಏಳ್ಗೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಅವರು ಸದಾ ಸ್ಮರಣೀಯರು’ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಬೆಡಸೂರ ಎಂ. ತಾಂಡಾದಲ್ಲಿ ಮಂಗಳವಾರ ಜರುಗಿದ ಗೋಪಾಲದೇವ ಜಾಧವ ಅವರ 39ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗೋಪಾಲದೇವ ಜಾಧವ ಅವರ ಆಶಯವನ್ನು ಅವರ ಪುತ್ರ, ಸಂಸದ ಡಾ. ಉಮೇಶ ಜಾಧವ ಮತ್ತು ಶಾಸಕ, ಮೊಮ್ಮಗ ಡಾ. ಅವಿನಾಶ ಜಾಧವ ಈಡೇರಿಸುತ್ತಿದ್ದಾರೆ’ ಎಂದರು.

ಹುಲಸೂರಿನ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ ‘ಡಾ.ಉಮೇಶ ಜಾಧವ ಮತ್ತು ಡಾ.ಅವಿನಾಶ ಜಾಧವ ಅವರಿಂದ ಇನ್ನಷ್ಟು ಉತ್ತಮ ಕಾರ್ಯಗಳು ನೆರವೇರಲಿ’ ಎಂದರು.

ಸಂಸದ ಡಾ.ಉಮೇಶ ಜಾಧವ ಮಾತನಾಡಿ ‘ನನ್ನ ತಂದೆ ಗೋಪಾಲದೇವ ಜಾಧವ 1953-54ರಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಾಸ್ಟೆಲ್ ಸ್ಥಾಪಿಸಿ ಅಕ್ಕ ಆಶಾಬಾಯಿ, ಅಜ್ಜಿ ಸೀತಾಬಾಯಿ ಓದಿಸಿದರು’ ಎಂದರು. ಸೋನ್ಯಾಲಗಿರಿ ಪರ್ವತಲಿಂಗ ಪರಮೇಶ್ವರ ಮಹಾರಾಜ, ಹವಾ ಮಲ್ಲಿನಾಥ ಮಹಾರಾಜ, ಮಳಖೇಡ ಸೈಯದ್ ಶಹಾ ಮುಸ್ತಾಫ ಖಾದ್ರಿ, ಬಡೆದರ್ಗಾ ಸಾಹೇಬ, ಚಿಮ್ಮಇದ್ಲಾಯಿ ಶ್ರೀ, ರಟಕಲ್ ಶ್ರೀ, ಸುಗೂರ ಕೆ. ಶ್ರೀ, ನಾಗೂರ ಶ್ರೀ, ಕೋಡ್ಲಿ ಶ್ರೀ, ಚಂದನಕೇರಾ ಶ್ರೀ, ಹೊಸಳ್ಳಿ ಶ್ರೀ ಮತ್ತು ಬಂಜಾರ ಧಾರ್ಮಿಕ ಗುರುಗಳು ಇದ್ದರು.

ವಿಧಾನ ಪರಿಷತ್ ಮುಖ್ಯಸಚೇತಕ ಪ್ರಕಾಶ ರಾಠೋಡ, ಶಾಸಕ ಡಾ.ಅವಿನಾಶ ಜಾಧವ, ರಾಮಚಂದ್ರ ಜಾಧವ, ಬಸವರಾಜ ಬೆಣ್ಣೂರಕರ್, ನಿಂಬೆಣ್ಣಪ್ಪ ಕೋರವಾರ, ರೇವಣಸಿದ್ದಪ್ಪ ಮಾಸ್ತರ್‌, ಸಂಜುಕುಮಾರ ತೆಳಮನಿ, ಮಲ್ಲಿನಾಥ ಪಾಟೀಲ, ಕೆ.ಎಂ.ಬಾರಿ, ಭೀಮಶೆಟ್ಟಿ ಮುರಡಾ, ರವಿರಾಜ ಕೊರವಿ, ಶಶಿಕಲಾ ತೆಂಗಳಿ, ಸಂತೋಷ ಗಡಂತಿ, ಲಕ್ಷ್ಮಣ ಅವಂಟಿ, ಶ್ರೀಮಂತ ಕಟ್ಟಿಮನಿ, ಉಮಾ ಪಾಟೀಲ, ಶಿವಶರಣಪ್ಪ ಗುತ್ತೇದಾರ, ರಾಮಲಿಂಗರೆಡ್ಡಿ ದೇಶಮುಖ,
ಪ್ರಶಾಂತ ಕದಂ, ರಮೇಶ ಕಿಟ್ಟದ, ರಾಮು ರಾಠೋಡ, ಶಿವರಾಜ ಪಾಟೀಲ ಗೊಣಗಿ, ರೇವಣಸಿದ್ದ ಬಡಾ, ಉಮೇಶ ಚವಾಣ, ಸಿದ್ದು ಮಾನಕರ, ರಾಜು ಜಾಧವ, ಅರುಣ ಪವಾರ, ಮಹೇಂದ್ರ ಪೂಜಾರಿ ಇದ್ದರು. ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೋಪಾಲದೇವ ಜಾಧವ ಮೆಮೋರಿಯಲ್ ಟ್ರಸ್ಟ್, ರೋಟರಿ ಕ್ಲಬ್ ಮತ್ತು ಕಾಗ್ನಿಜೆಂಟ್
ಸಹಯೋಗದಲ್ಲಿ ಆಯ್ದ ಪ್ರಥಮ ದರ್ಜೆ ಕಾಲೇಜುಗಳಿಗೆ 255 ಕಂಪ್ಯೂಟರ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT