ಕಲಬುರಗಿ: ‘ಸಮಾಜ ಒಳಿತಿಗೆ ಹಾಗೂ ಅಪ್ಲಿಕೇಶನ್‍ಗಳು ವೇಗವಾಗಿ ಬೆಳೆಯಲು ಕೃತಕ ಬುದ್ಧಿಮತ್ತೆಯು ಅತಿ ಮುಖ್ಯವಾಗಿದೆ’ ಎಂದು ಸ್ಪೇನ್‍ನ ಡೇಟಾ ಸೈನ್ಸ್ ಮತ್ತು ಬಿಗ್ ಡೇಟಾ ಲ್ಯಾಬ್‍ನ ಕೃತಕ ಬುದ್ಧಿಮತ್ತೆ ಪರಿಣಿತ ಡಾ. ಮಿಗುಯೆಲ್ ಗಾರ್ಸಿಯಾ ಟೊರೆಸ್ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಮಹಿಳಾ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ವಿಭಾಗ, ಮೆಕ್ಯಾನಿಕಲ್ ವಿಭಾಗ, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಹಾಗೂ ಕೃತಕ ಬುದ್ಧಿಮತ್ತೆ ಮತ್ತು ಮಶಿನ್ ಲರ್ನಿಂಗ್ ವಿಭಾಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಫ್ಯೂಚರಿಸ್ಟಿಕ್ ತಂತ್ರಜ್ಞಾನ ಮತ್ತು ಕ್ಷಿಪಣಿ ಹಾಗೂ ಏರೋಸ್ಪೇಸ್ ತಂತ್ರಜ್ಞಾನಗಳ’ ಉಪನ್ಯಾಸಗಳ ಸರಣಿ ಉದ್ಘಾಟಿಸಿ ಅವರು ಮಾತನಾಡಿದರು.
‘ಪೆರಗ್ವೆ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಬೇಕರಿ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ ಅಪ್ಲಿಕೇಶನ್ ಕುರಿತು ಕಳೆದ ಒಂದು ವರ್ಷದಿಂದ ಸ್ವತಃ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಬೇಕರಿ ಉದ್ಯಮದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆಯಿಂದ ಬೇಕರಿ ಉತ್ಪನ್ನಗಳ ಗುಣಮಟ್ಟ ಮತ್ತು ಅದರ ವಿತರಣೆಯನ್ನು ಸುಧಾರಿಸಲು ಬಹಳ ಸಹಾಯವಾಗಿದೆ’ ಎಂದರು.
ಶರಣಬಸವ ವಿಶ್ವವಿದ್ಯಾಲಯದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಡಾಟಾ ಸೈನ್ಸ್‌ಸ್ ಹಾಗೂ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ವಿದ್ಯಾರ್ಥಿಗಳೊಂದಿಗೆ ಟೊರೆಸ್ ಸಂವಾದ ನಡೆಸಿದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಹಿರಿಯ ವಿಜ್ಞಾನಿ ಡಾ. ಜಿ ಮಲ್ಲಿಕಾರ್ಜುನ್, ಡಿಆರ್‌ಡಿಒ ವಿಜ್ಞಾನಿ ರಾಜಪ್ಪ ಮೇತ್ರೆ ಉಪನ್ಯಾಸ ನೀಡಿದರು.
ಸಮಕುಲಪತಿ ಪ್ರೊ. ವಿ.ಡಿ.ಮೈತ್ರಿ, ಕುಲಸಚಿವ ಅನಿಲಕುಮಾರ ಬಿಡವೆ, ಡೀನ್ ಲಕ್ಷ್ಮಿ ಪಾಟೀಲ್ ಮಾಕಾ, ಬೆಂಗಳೂರಿನ ಎನ್‍ಐಟಿಟಿಇ ಮೀನಾಕ್ಷಿ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊ. ಪರಮೇಶಾಚಾರಿ, ಗೋದುತಾಯಿ ಮಹಿಳಾ ಎಂಜಿನಿಯರಿಂಗ್ ಕಾಲೇಜಿನ ಶಿವಲೀಲಾ, ಸುಜಾತಾ ಮಲ್ಲಾಪುರ ಹಾಗೂ ಗಜೇಂದ್ರನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.