ಚಿಂಚೋಳಿ: ಪಟ್ಟಣದ ರೈತ ಅನಿಲ ಢಗೆ ಅವರು 2 ಎಕರೆಯಲ್ಲಿ ಬೆಳೆದ ದ್ರಾಕ್ಷಿ ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡದೇ ಒಣದ್ರಾಕ್ಷಿ ತಯಾರಿಸಿ ಮಾರಾಟ ಮಾಡುವ ಮೂಲಕ ಉತ್ತಮ ಆದಾಯ ಗಳಿಸಿದ್ದಾರೆ.

ತಮ್ಮ 2 ಎಕರೆ ಜಮೀನಿನಲ್ಲಿ 5 ರಿಂದ 6 ಟನ್ ಒಣದ್ರಾಕ್ಷಿ ತಯಾರಿಸಿದ್ದಾರೆ. ಮಾರುಕಟ್ಟೆಯಲ್ಲಿ ಹಣ್ಣುಗಳಿಗಿಂತ ಒಣದ್ರಾಕ್ಷಿಗೆ ಹೆಚ್ಚಿನ ದರ ಇರುವ ಕಾರಣ ಒಣದ್ರಾಕ್ಷಿ ತಯಾರಿಕೆಗೆ ಆದ್ಯತೆ ನೀಡಿ ಉತ್ತಮ ಆದಾಯ ಪಡೆದಿದ್ದಾರೆ.

ಕಳೆದ ವರ್ಷ ಶಿವರಾತ್ರಿ ಸಮಯದಲ್ಲಿ ಗಾರಂಪಳ್ಳಿ ಬಳಿ ಹೆದ್ದಾರಿಯಲ್ಲಿ 8 ರಿಂದ 10 ಅಂಗಡಿಗಳನ್ನು ತೆರೆದು ದ್ರಾಕ್ಷಿ ಹಣ್ಣುಗಳನ್ನು ಮಾರಾಟ ಮಾಡಿದ್ದರು. ಆದರೆ ಪ್ರಸಕ್ತ ವರ್ಷ ಅಂಗಡಿ ತೆರೆಯದೆ ಸಂಪೂರ್ಣ ಒಣದ್ರಾಕ್ಷಿ ತಯಾರಿಸಿದ್ದಾರೆ. ಇದರಿಂದ ಸುಮಾರು ₹15 ಲಕ್ಷ ಆದಾಯ ಪಡೆದಿದ್ದಾರೆ. ಇದೇ ಹಣದಲ್ಲಿ ಬೆಳೆ ನಿರ್ವಹಣೆ ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ ದ್ರಾಕ್ಷಿ ಬೇಸಾಯವನ್ನು ಪರಿಚಯಿಸಿದವರಲ್ಲಿ ಅನಿಲ ಢಗೆ ಕೂಡ ಒಬ್ಬರು. ಅಂದಿನ ತೋಟಗಾರಿಕೆ ಸಹಾಯಕ ನಿರ್ದೇಶಕ ಅಜಿಮುದ್ದಿನ್ ಅವರ ಸಹಕಾರದಿಂದ ದ್ರಾಕ್ಷಿ ಬೆಳೆ ವಿಸ್ತರಣೆ ಮಾಡಲು ಸಹಾಯವಾಗಿದೆ.

10 ಎಕರೆ ಬದಲು 2 ಎಕರೆಯಿಂದ ಮಾತ್ರ ಆದಾಯ!: ಪ್ರಸಕ್ತ ವರ್ಷ ದ್ರಾಕ್ಷಿ ಬೆಳೆಗಾರರು ನಷ್ಟಕ್ಕೊಳಗಾಗಿದ್ದಾರೆ. ಕಳೆದ ಏಪ್ರಿಲ್ನಿಂದ ನವೆಂಬರವರೆಗೆ ನಿರಂತರ ಮಳೆ ಸುರಿದಿದ್ದರಿಂದ ದ್ರಾಕ್ಷಿ ಗಿಡಗಳು ಫಲ ನೀಡದ ಕಾರಣ ಬೆಳೆಗಾರರನ್ನು ನಷ್ಟಕ್ಕೆ ದೂಡಿದೆ. ತಾಲ್ಲೂಕಿನ ಗಾರಂಪಳ್ಳಿಯಲ್ಲಿ ಸುಮಾರು 10 ಎಕರೆಯಲ್ಲಿ ದ್ರಾಕ್ಷಿ ಬೇಸಾಯ ಮಾಡುತ್ತಿರುವ ಅನಿಲ ಢಗೆ ಅವರಿಗೆ ದ್ರಾಕ್ಷಿ ಹಣ್ಣು ಹುಳಿಯಾಗಿ ಪರಿಣಮಿಸಿದೆ.

ದ್ರಾಕ್ಷಿಗಳಿಗೆ ಪ್ರೂನಿಂಗ್ ಮಾಡುವುದು ಕಡ್ಡಾಯ ಅದರಂತೆ ನಾವು ಪ್ರೂನಿಂಗ್ ಮಾಡಿದ ಮೇಲೆ ಬಿಸಿಲಿನ ಕೊರತೆಯಾಯಿತು ಇದರಿಂದ ಹಣ್ಣಿನ ಗಿಡಗಳು ಕವಲೊಡೆಯುವ ಮತ್ತು ಕಣ್ಣು ಬಿಡುವ ಪ್ರಕ್ರಿಯೆ ಅಸಮರ್ಪಕವಾಯಿತು. ಹೀಗಾಗಿ ಲಾಭಕ್ಕಿಂತ ನಷ್ಟವಾಗಿದೆ ಎಂದು ತಿಳಿಸಿದರು.

ಸಂಸ್ಕರಣ ಘಟಕ ಸ್ಥಾಪನೆಗೆ ಒಲವು

ಚಿಂಚೋಳಿ ತಾಲ್ಲೂಕಿನ ಗಾರಂಪಳ್ಳಿ, ಮೊಗದಂಪುರದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ರೈತರು ಒಣದ್ರಾಕ್ಷಿ ತಯಾರಿಸಿದರೂ ಗ್ರೇಡಿಂಗ್ ನೆಟ್ಟಿಂಗ್ ಘಟಕ ಇಲ್ಲಿಲ್ಲ. ಇದರಿಂದ ಬೇರೆ ಕಡೆ ಒಯ್ದು ಒಣ ದ್ರಾಕ್ಷಿ ಸಂಸ್ಕರಿಸುವುದು ಅನಿವಾರ್ಯವಾಗಿದೆ. ಆದರೆ ಸಮಗ್ರ ತೋಟಗಾರಿಕೆ ಅಭಿವೃದ್ಧಿ (ಸಿಎಚ್ಡಿ) ಯೋಜನೆ ಅಡಿಯಲ್ಲಿ ದ್ರಾಕ್ಷಿ ಬೆಳೆ ಬೇಸಾಯಕ್ಕೆ ಇಲಾಖೆ ಪ್ರೋತ್ಸಾಹ ನೀಡಿದರೆ ನೆಟ್ಟಿಂಗ್ ಗ್ರೇಡಿಂಗ್ ತಮ್ಮ ತೋಟದಲ್ಲಿ ಸ್ಥಾಪಿಸಲು ಉತ್ಸುಕರಾಗಿರುವುದಾಗಿ ಅನಿಲ ಢಗೆ 'ಪ್ರಜಾವಾಣಿ'ಗೆ ತಿಳಿಸಿದರು.

ಗಾರಂಪಳ್ಳಿಯಲ್ಲಿ ರೈತರು ಬೆಳೆದ ದ್ರಾಕ್ಷಿ ಬೆಳೆಗೆ ಕಾಯಿ ಕಚ್ಚದೇ ಇರುವ ಕುರಿತು ವಿಜ್ಞಾನಿಗಳ ತಂಡವನ್ನು ರೈತರ ತೋಟಗಳಿಗೆ ಕಳುಹಿಸಿ ವರದಿ ಪಡೆಯಲಾಗುವುದು
ಸಂತೋಷ ಇನಾಂದಾರ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.