ಮಂಗಳವಾರ, ನವೆಂಬರ್ 12, 2019
28 °C

ಕಳುವಾದ ಚಿನ್ನ ಮರಳಿಸಿದ ಪೊಲೀಸರು

Published:
Updated:
Prajavani

ಕಮಲಾಪುರ: ತಾಲ್ಲೂಕಿನ ಹೊಳಕುಂದಾ ಗ್ರಾಮದಲ್ಲಿ ಕಳೆದ ವರ್ಷ ಗುಂಡಪ್ಪ ನಾಗಣ್ಣ ಮೋಳಕೇರಿ ಎಂಬುವವರ ಮನೆಯಲ್ಲಿ ಚಿನ್ನ, ನಗದು ಕಳುವು ಮಾಡಿದವರನ್ನು ಪೊಲೀಸರು ಪತ್ತೆ ಹಚ್ಚಿದ್ದು, 28 ಗ್ರಾಂ. ಚಿನ್ನವನ್ನು ಭಾನುವಾರ ಮಾಲೀಕನಿಗೆ ಒಪ್ಪಿಸಿದ್ದಾರೆ.

‘ಫೆ. 5, 2018 ರಂದು ಕಳುವು ಮಾಡಿದ್ದರು. ಈ ತಂಡದವರು ಜು. 19, 2019ರಂದು ರಾಯಚೂರು ಪೊಲೀಸ್‌ ಠಾಣೆಯಲ್ಲಿ ಸಿಕ್ಕಿಬಿದ್ದಿದ್ದಾಗ ಬಾಯಿಬಿಟ್ಟಿದ್ದಾರೆ. ಅಲ್ಲಿಂದ ಅವರು ಕಳುಹಿಸಿದ್ದು ನಾವು ಮರಳಿಸಿದ್ದೇವೆ’ ಎಂದು ಸಿಪಿಐ ರಾಘವೇಂದ್ರ ಭಜಂತ್ರಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)