ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊನ್ನ ಭೀಮಾ ಬ್ಯಾರೇಜಿಗೆ ಹರಿದುಬರುತ್ತಿರುವ ನೀರು: ಜಿಲ್ಲೆಯಾದ್ಯಂತ ಉತ್ತಮ ಮಳೆ

Last Updated 27 ಜೂನ್ 2021, 6:36 IST
ಅಕ್ಷರ ಗಾತ್ರ

ಕಲಬುರ್ಗಿ: ನಗರ ಸೇರಿದಂತೆ ಚಿಂಚೋಳಿ, ಶಹಾಬಾದ್, ಯಡ್ರಾಮಿ ತಾಲ್ಲೂಕಿನಲ್ಲಿ ಬೆಳಿಗ್ಗೆಯಿಂದಲೇ ಉತ್ತಮ ‌ಮಳೆ ಸುರಿಯುತ್ತಿದೆ.

ರಾತ್ರಿಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಳೆಯಿಂದಾಗಿ ನಗರದ ಸ್ವರೂಪವೇ ಬದಲಾಗಿದ್ದು, ಮಲೆನಾಡನ್ನು ನೆನಪಿಸುತ್ತಿದೆ.

ಮಳೆಯ ಜೊತೆಗೆ ಭಾನುವಾರ ಇರುವುದರಿಂದ ನಗರದಲ್ಲಿ ಜನಸಂಚಾರ ವಿರಳವಾಗಿದ್ದು, ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ.

ಮಹಾರಾಷ್ಟ್ರದಲ್ಲಿ ‌ಮಳೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಭೀಮಾ ನದಿ ತೀರದ ಜನರು ಎಚ್ಚರ ವಹಿಸುವಂತೆ ನೀರಾವರಿ ನಿಗಮದ ಅಧಿಕಾರಿಗಳು ಜನರಿಗೆ ಮನವಿ ಮಾಡಿದ್ದಾರೆ.

ಅಫಜಲಪುರ ಬಳಿ ಇರುವ ಸೊನ್ನ ಭೀಮಾ ಬ್ಯಾರೇಜಿಗೆ ಜಿಲ್ಲಾ‌ ಪಂಚಾಯಿತಿ ‌ಸಿಇಓ ಡಾ.ದಿಲೀಷ್ ಶಶಿ ಶನಿವಾರ ಭೇಟಿ ನೀಡಿ ನೀರಿನ ಮಟ್ಟ ಏರಿಕೆ ಕುರಿತು ಎಂಜಿನಿಯರ್ ಗಳೊಂದಿಗೆ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT