ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ಭಾನುವಾರದ ಲಾಕ್‌ಡೌನ್, ಬಸ್ ಸಂಚಾರ ಸ್ತಬ್ಧ

Last Updated 24 ಮೇ 2020, 5:02 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ವೈರಾಣು ಹಬ್ಬುತ್ತಿರುವುದನ್ನು ತಡೆಯಲು ರಾಜ್ಯ ಸರ್ಕಾರ ಘೋಷಿಸಿರುವ ಭಾನುವಾರದ ಲಾಕ್‌ಡೌನ್ ಅಂಗವಾಗಿ ನಗರದಲ್ಲಿ ಬಸ್ ಹಾಗೂ ಇತರ ವಾಹನಗಳ ಸಂಚಾರ ಸ್ತಬ್ದಗೊಂಡಿದೆ.

ಲಾಕ್‌ಡೌನ್ ಜೊತೆಗೆ ಬಿಸಿಲಿನ ತಾಪ ಹೆಚ್ಚಿದ್ದರಿಂದ ಜನಸಂಚಾರವೂ ವಿರಳಗೊಂಡಿದೆ‌.

ನಗರದಲ್ಲಿ ಆಟೊ ಸಂಚಾರ ಹಾಗೂ ಕಿರಾಣಿ ಅಂಗಡಿ ಹೊರತುಪಡಿಸಿ ಉಳಿದ ವಾಣಿಜ್ಯ ಚಟುವಟಿಕೆಗಳಿಗೆ ಮೊದಲಿನಿಂದಲೂ ನಿರ್ಬಂಧ ಮುಂದುವರಿದೇ ಇದೆ.

ಇದಕ್ಕೆ ಪೂರಕವಾಗಿ ಬಸ್, ಖಾಸಗಿ ವಾಹನ ಸಂಚಾರ ಸ್ತಗಿತಗೊಂಡಿದ್ದರಿಂದ ನಗರದ‌ ರಸ್ತೆಗಳು ಖಾಲಿ ಎನಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT