ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಣ್ಣಿ ಸಡಕ್ 1ನೇ ವಾರ್ಡ್‌ಗೆ 24ಕ್ಕೆ ಮರುಮತದಾನ: ತಹಶೀಲ್ದಾರ್

Last Updated 22 ಡಿಸೆಂಬರ್ 2020, 7:42 IST
ಅಕ್ಷರ ಗಾತ್ರ

ಕಮಲಾಪುರ (ಕಲಬುರ್ಗಿ): ಕಿಣ್ಣಿ ಸಡಕ್ ಗ್ರಾಮ ಪಂಚಾಯಿತಿ ವಾರ್ಡ್ ಸಂಖ್ಯೆ 1ರ ಚುನಾವಣೆಯ ಮರುಮತದಾನ ಡಿ. 24ರಂದು ನಡೆಯಲಿದೆ ಎಂದು ತಹಶೀಲ್ದಾರ್ ರಮೇಶ್ ಪೆದ್ದೆ ತಿಳಿಸಿದರು.

ವಾರ್ಡ್ ಸಂಖ್ಯೆ 1ರಲ್ಲಿ ಸ್ಪರ್ಧಿಸಿದ್ದ ಜಯರಾಜ ಹಲಗೆ ಎಂಬುವವರ ಚಿಹ್ನೆ ಬದಲಾವಣೆಯಾಗಿ ಮತದಾನ ಸ್ಥಗಿತಗೊಂಡಿತ್ತು.

ವಾರ್ಡ್ ಸಂಖ್ಯೆ 1ರ ಪರಿಶಿಷ್ಟ ಜಾತಿ ಸಾಮಾನ್ಯ ಸ್ಥಾನಕ್ಕೆ ಜಯರಾಜ ಎ ಹಲಗಿ ನಾಮಪತ್ರ ಸಲ್ಲಿಸಿದ್ದರು.
ಇವರಿಗೆ 145 ತುತ್ತೂರಿ ಚಿಹ್ನೆ ನೀಡಲಾಗಿತ್ತು. ಆದರೆ ಮತಪತ್ರದಲ್ಲಿ ಕಹಳೆ ಊದುತ್ತಿರುವ ಮನುಷ್ಯನ ಚಿಹ್ನೆ ಪ್ರಿಂಟ್ ಆಗಿದೆ. ಅಭ್ಯರ್ಥಿ ಮತ ಚಲಾಯಿಸಲು ಹೋದಾಗ ಗಮನಿಸಿ ಮತಗಟ್ಟೆ ಅಧಿಕಾರಿಗೆ ತಿಳಿಸಿದ್ದು, ತಕ್ಷಣ ಮತದಾನ ಸ್ಥಗಿತಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT