ಶೇಂಗಾ ಬಿತ್ತನೆ ಬೀಜ ಮಾರುಕಟ್ಟೆಯಲ್ಲಿ 1 ಕೆ.ಜಿಗೆ ₹150 ಆಗಿರುವುದರಿಂದ ರೈತರು ದುಬಾರಿ ಬೀಜ, ಗೊಬ್ಬರ ಹಾಕಿ ಶೇಂಗಾ ಬೆಳೆಯುವುದು ಕಷ್ಟಕರವಾಗಿದೆ. ಹೀಗಾಗಿ ರೈತ ಮುಖಂಡರಾದ ತಿಪ್ಪಣ್ಣ ಚಲಗೇರಿ, ಸುಭಾಸ ಮ್ಯಾಕೇರಿ ಹಾಗೂ ಗುರು ಚಾಂದಕೋಟೆ ಶೇಂಗಾ ಬೆಳೆ ಕುರಿತು ಮಾಹಿತಿ ನೀಡಿ, ‘ಕೃಷಿ ಇಲಾಖೆಯವರು ಪ್ರತಿ ವರ್ಷ ಮುಂಗಾರು ಹಂಗಾಮಿನಲ್ಲಿ ಶೇಂಗಾ ಬಿತ್ತನೆ ಬೀಜ ಸಹಾಯಧನದಲ್ಲಿ ಮಾರಾಟ ಮಾಡಬೇಕು. ಶೇಂಗಾ ಬೆಳೆಯುವ ಕುರಿತು ಕೃಷಿ ಇಲಾಖೆಯವರು ಬೇಸಿಗೆಯಲ್ಲಿ ರೈತರಿಗೆ ಕಾರ್ಯಗಾರ ಏರ್ಪಡಿಸಬೇಕು. ಬೇಸಿಗೆ ಅವಧಿಯಲ್ಲಿ ಶೇಂಗಾ ಬಿತ್ತನೆ ಮಾಡಲು ನೀರಾವರಿ ರೈತರಿಗೆ ಸಹಾಯಧನದಲ್ಲಿ ಬಿತ್ತನೆ ಬೀಜ ಮಾರಾಟ ಮಾಡಬೇಕು’ ಎಂದು ಆಗ್ರಹಿಸಿದರು.