‘ಸ್ನಾತಕ ಕೋರ್ಸ್‌ಗಳಿಗೆ ಹೊಸ ಪಠ್ಯಕ್ರಮ’

7

‘ಸ್ನಾತಕ ಕೋರ್ಸ್‌ಗಳಿಗೆ ಹೊಸ ಪಠ್ಯಕ್ರಮ’

Published:
Updated:
Deccan Herald

ಕಲಬುರ್ಗಿ: ಕೌಶಲಭರಿತ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಗುಲಬರ್ಗಾ ವಿಶ್ವವಿದ್ಯಾಲಯವು ಹೊಸ ಸ್ನಾತಕ ಪಠ್ಯಕ್ರಮ ರಚಿಸಿ, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಜಾರಿಗೊಳಿಸಿದೆ ಎಂದು ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವ ರಾಜನಾಳಕರ್‌ ಲಕ್ಷ್ಮಣ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ಅಧ್ಯಯನ ವಿಭಾಗದಲ್ಲಿ ಪದವಿ ಕಾಲೇಜುಗಳ ಗಣಿತ ಅಧ್ಯಾಪಕರಿಗೆ ಹಮ್ಮಿಕೊಂಡಿರುವ ಎರಡು ದಿನಗಳ ಶೈಕ್ಷಣಿಕ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಬಿಎಸ್ಸಿ ಪದವಿಯ ಗಣಿತ ವಿಷಯದಲ್ಲಿ ಪ್ರಾಯೋಗಿಕ ತರಗತಿಗಳನ್ನು ಮೊದಲ ಬಾರಿ ಅಳವಡಿಸಲಾಗಿದೆ. ವಿದ್ಯಾರ್ಥಿಗಳು ‘ಮ್ಯಾಕ್ಸಿಮಾ’ ಮತ್ತು ‘ಸೈಲ್ಯಾಬ್’ ಎಂಬ ಮುಕ್ತ ಮತ್ತು ಉಚಿತ ತಂತ್ರಾಂಶಗಳ ಸಹಾಯದಿಂದ ಗಣಿತದ ಜಟಿಲ ಸಮಸ್ಯೆಗಳನ್ನು ಪರಿಹರಿಸುವ ವಿಶೇಷ ಕೌಶಲ ಪಡಿಯಲಿದ್ದಾರೆ ಎಂದರು.

ಈ ತಂತ್ರಾಂಶಗಳನ್ನು ಬಳಸಿ ಗಣಿತದ ಜಟಿಲ ಸಮಸ್ಯೆಗಳನ್ನು ಪರಿಹರಿಸುವ ವಿಧಾನ ತಿಳಿಸಿಕೊಡಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್‌ ಪ್ರೊ.ಕೆ. ವಿಜಯಕುಮಾರ ಮಾತನಾಡಿ, ಹೊಸ ಪಠ್ಯಕ್ರಮದ ಅನುಸಾರ ಅಧ್ಯಾಪಕರು ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ.ಸುಶಾನ ಬೈರಿ, ಡಾ.ಮಹಾಂತೇಶ ಸ್ವಾಮಿ ಉಪನ್ಯಾಸ ನಿಡಿದರು.

ಗಣಿತ ವಿಭಾಗದ ಮುಖ್ಯಸ್ಥರಾದ ಪ್ರೊ. ಎನ್. ಬಿ. ನಡುವಿನಮನಿ ಅಧ್ಯಕ್ಷತೆ ವಹಿಸಿದ್ದರು. ಸ್ನಾತಕ ಗಣಿತ ಅಧ್ಯಯನ ಮಂಡಳಿಯ ಸದಸ್ಯ ಪ್ರೊ. ರಾಜಶೇಖರ ಚಳಗಿರಿ, ಪ್ರೊ. ಪಿ.ಸಿ. ಧೋನಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !