ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಪ್ರಾಣಿಶಾಸ್ತ್ರ ವಿಭಾಗ; ವಿದ್ಯಾರ್ಥಿಗಳ ಬೀಳ್ಕೊಡುಗೆ

Last Updated 19 ನವೆಂಬರ್ 2021, 5:25 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದಲ್ಲಿ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ವಿಜಯಕುಮಾರ ಭೂತಪೂರ ಉದ್ಘಾಟಿಸಿದರು.

ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ವಿಜಯಕುಮಾರ ಮಾತನಾಡಿ, ‘ಪ್ರತಿವರ್ಷ ನಮ್ಮ ವಿಭಾಗದಿಂದ 10ರಿಂದ 15 ವಿದ್ಯಾರ್ಥಿಗಳು ಪಾಸಾಗುತ್ತಾರೆ’ ಎಂದರು. ಮುಖ್ಯ ಅತಿಥಿಗಳಾಗಿ ವಿದ್ಯಾವಿಷಯಕ ಪರಿಷತ್ ಸದಸ್ಯರಾದ ರಾಜಕುಮಾರ ಕಗ್ಗನಮಡಿ, ಪ್ರಮೋದ್‌ ಆಗಮಿಸಿದ್ದರು. ಸಿಂಡಿಕೇಟ್ ಸದಸ್ಯ ಸಂಪತ್‌ಕುಮಾರ ಲೋಯಾ ಅಧ್ಯಕ್ಷತೆ ವಹಿಸಿದ್ದರು.

ಪ್ರಾಣಿಶಾಸ್ತ್ರ ವಿಭಾಗದ ಕೆ–ಸೆಟ್‌ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಾದ ಸಮರಿನ್ ಬೇಗಂ ಮಖಬೂಲ್‍ಮಿಯಾ, ಸೈಯದಾ ಅಪ್ಸಾನಾ ಅಂಜುಮ್ ಸೈಯ್ಯದ ಮಹಬೂಬ್‌, ರೇಣುಕಾ ಶಿವಕುಮಾರ, ಗರೀಬ್ ಪಾಶಾ ಸಾಧಿಕ್ ಹುಸೇನ, ಸೈಯಿದಾ ಖಸೀಮ್ ಫಾತಿಮಾ ಸೈಯ್ಯದ್‌ ಮುಸ್ತಫಾ ಹುಸೇನ, ರೂತ್ ಮಾರ್ಕ್ಸ್‌ ಶರ್ಮಾ, ಶ್ರೀಕಾಂತ ಭೀಮಣ್ಣ, ಸಾದಿಯಾ ತಹಸೀನ್, ಸಿದ್ದಿಕಿ ಮಹ್ಮದ ಉಸ್ಮಾನ್‌, ಅಶ್ವಿನಿ ವೀರಣ್ಣಾ ಗುಳಗಿ, ನಟರಾಜ್ ಬಸವರಾಜ ಹಾಗೂ ವಿಭಾಗದಿಂದ ವರ್ಗಾವಣೆಯಾದ ಸಿಬ್ಬಂದಿ ಲಕ್ಷ್ಮೀಬಾಯಿ ಪರೀಟ, ಜಗನ್ನಾಥ ಕೆಂಗಲ್, ದೀಪಿಕಾ ಭೀಮಶಾ ಅವರನ್ನು ಸನ್ಮಾನಿಸಲಾಯಿತು.

ಸಂಜೀವಕುಮಾರ ಕಾಂಬಳೆ, ಬೋಧಕೇತ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಇದ್ದರು. ಅತಿಥಿ ಉಪನ್ಯಾಸಕ ಪೃಥ್ವಿರಾಜ ಬೆಡಜರಗಿ ಅವರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT