ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳ ಸಂಗ್ರಹಕ್ಕೆ ಫ.ಗು. ಹಳಕಟ್ಟಿ ಕೊಡುಗೆ ಅಪಾರ; ಮೋದಿ

Last Updated 3 ಜುಲೈ 2022, 2:52 IST
ಅಕ್ಷರ ಗಾತ್ರ

ಕಲಬುರಗಿ: ‘ಡಾ.ಫ.ಗು. ಹಳಕಟ್ಟಿ ಅವರು ಹರಿದು, ಹಂಚುಹೋಗಿದ್ದ ವಚನಗಳನ್ನು ಯಾವುದೇ ಮೂಲ ಸೌಕರ್ಯ ಇಲ್ಲದೆ ಮನೆ, ಮಠಗಳಿಗೆ ಹೋಗಿ ವಚನಗಳನ್ನು ಸಂಗ್ರಹಣೆ ಮಾಡಿದ್ದರ ಶ್ರಮದ ಫಲವಾಗಿ ಇಂದು ನಾವು ವಚನಗಳನ್ನು ಓದುತ್ತಿದ್ದೇವೆ’ ಎಂದು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶರಣ ಕುಮಾರ ಮೋದಿ ಅಭಿಪ್ರಾಯಪಟ್ಟರು.

ಶನಿವಾರ ಇಲ್ಲಿನ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಡಾ.ಫ.ಗು. ಹಳಕಟ್ಟಿ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ಡಾ.ಫ.ಗು. ಹಳಕಟ್ಟಿ ಅವರ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

‘ಡಾ.ಫ.ಗು. ಹಳಕಟ್ಟಿ ಅವರು ಬಸವಣ್ಣನವರ ವಚನಗಳನ್ನು ಒಂದುಗೂಡಿಸಿ, ನಮ್ಮೆಲ್ಲರಿಗೂ ವಚನ ಸಾಹಿತ್ಯದ ಅರಿವು ಮೂಡಿಸಿದರು’ ಎಂದರು.

ಜಯಂತ್ಯುತ್ಸವ ಸಮಿತಿ ಜಿಲ್ಲಾಧ್ಯಕ್ಷ ಶಿವಲಿಂಗಪ್ಪ ಈರಣಪ್ಪಾ ಅಷ್ಟಗಿ ಮಾತನಾಡಿದರು.

ಜಾಗತೀಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವ ಮಾತನಾಡಿದರು. ನಿವೃತ್ತ ಪ್ರಾಧ್ಯಪಕಿ ಜಯಶ್ರೀ ದಂಡೆ ಅವರು ಉಪನ್ಯಾಸ ನೀಡಿದರು.
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷದಯಾಘನ ಧಾರವಾಡಕರ್, ಜಿಲ್ಲಾಡಳಿತ ಚುನಾವಣೆ ಶಾಖೆಯ ತಹಶೀಲ್ದಾರ್ ಮಹಾಂತೇಶ ಮುಡಬಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯ ನಿರ್ದೇಶಕ ದತ್ತಪ್ಪ ಸಾಗನೂರ, ಹಟಗಾರ ಸಮಾಜದ ಗೌರವಾಧ್ಯಕ್ಷ ಸೂರ್ಯಕಾಂತ ಸೊನ್ನದ, ಉಪಾಧ್ಯಕ್ಷ ಸಂಗಮನಾಥ ರೇವತಗಾಂವ, ಪ್ರಧಾನ ಕಾರ್ಯದರ್ಶಿ, ವಿನೋದಕುಮಾರ ಶ. ಜೆನವೇರಿ, ಖಜಾಂಚಿ ರಾಜು ಕೋಷ್ಠಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT