ಶನಿವಾರ, ಜುಲೈ 2, 2022
20 °C

ಹಾರಕೂಡ ಜಾತ್ರೆ: ಶಾಂತಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ಹಾರಕೂಡ ಚನ್ನಬಸವ ಶಿವಯೋಗಿಗಳ 71ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ರಾತ್ರಿ ಶ್ರೀಮಠದ‌ ಡಾ. ಚನ್ನವೀರ ಶಿವಾಚಾರ್ಯರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.

ಮಾ.3ರಿಂದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಕಲಬುರಗಿ ಶರಣಬಸವೇಶ್ವರ ಪುರಾಣ ನಡೆಯುತ್ತಿದೆ. 11ರಂದು ಪಲ್ಲಕ್ಕಿ ಮತ್ತು‌ಉಚ್ಚಾಯಿ ಮೆರವಣಿಗೆ ಸಾಗುವ ಮಾರ್ಗ, ಮಾ. 12ರಂದು ನಡೆಯುವ ರಥೋತ್ಸವ, ಶಿವಾನುಭವ ಚಿಂತನ ಮತ್ತು ಮಾ.23ರಂದು ನಡೆಯುವ ಜಂಗಿ ಪೈಲ್ವಾನರ ಕುಸ್ತಿ, ಪಶುಗಳ ಪ್ರದರ್ಶನ ಹಾಗೂ ಸಂಗೀತ ರಸ ಮಂಜರಿ‌ ಕಾರ್ಯಕ್ರಮದ ವಿವರಗಳನ್ನು ಪೊಲೀಸರು ಪಡೆದರು.

ಹಾರಕೂಡ ಚನ್ನಬಸವ ಶಿವಯೋಗಿಗಳ ಜಾತ್ರೆ ಸರ್ವಧರ್ಮ ಸಮನ್ವಯದ ಮಾದರಿಯಲ್ಲಿ ನಡೆಸಲಾಗುತ್ತದೆ. ಕೋಮು ಸೌಹಾರ್ದತೆ ಕಾಪಾಡುವುದರ ಜತೆಗೆ ಕೋವಿಡ್ ನಿಯಮ ಪಾಲಿಸಲಾಗುವುದು ಎಂದು ಡಾ. ಚನ್ನವೀರ ಶಿವಾಚಾರ್ಯ ತಿಳಿಸಿದರು.

ಈ ವೇಳೆ ಡಿವೈಎಸ್ಪಿ‌ ಬಸವೇಶ್ವರ ಹೀರಾ, ಸರ್ಕಲ್ ಇನಸ್ಪೆಕ್ಟರ್ ಮಹಾಂತೇಶ ಪಾಟೀಲ, ಸನ್‌ಇನ್‌ಸ್ಪೆಕ್ಟರ್ ಮಂಜುನಾಥರೆಡ್ಡಿ ಶಹಾಪುರ, ನಾಗರಾಜ ಶೆಳಕೆ ಹಾಗೂ ಜಾತ್ರಾ ಮಹೋತ್ಸವ ಸಮಿತಿಯ ಮುಖ್ಯಸ್ಥ ಸುಭಾಷ ಸೀಳಿನ್, ರಾಜಶೇಖರ ಮಜ್ಜಗಿ, ನಾಗರಾಜ ಕಲಬುರಗಿ, ಇಂದುಶೇಖರ ಗೌಡನಹಳ್ಳಿ, ರೇವಣಸಿದ್ದಪ್ಪ ಮಜ್ಜಗಿ, ಸಂಗಮೇಶ ಮಾಲಿ, ವಿರೂಪಾಕ್ಷಪ್ಪ ಯಂಪಳ್ಳಿ, ಮಲ್ಲಿಕಾರ್ಜುನ ಅಲ್ಲಾಪುರ, ನಾಗರಾಜ ಮಲಕೂಡ, ರಾಜು ಪಟಪಳ್ಳಿ, ರವಿಕುಮಾರ ಹುಸೇಬಾಯಿ, ಮಧುಕರ ಕೊಳ್ಳೂರು, ಸಂಗಮೇಶ ಮೂಲಿಮನಿ, ಮಲ್ಲಿಕಾರ್ಜುನ ಪಾಲಾಮೂರ ಸೇರಿದಂತೆ ಶ್ರೀ ಮಠದ ಭಕ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು