ಶುಕ್ರವಾರ, ಅಕ್ಟೋಬರ್ 22, 2021
30 °C
ಭಾರಿ ಮಂಜು ಮುಸುಕಿನ ವಾತಾವರಣ 

ಮಂಜಿನಲ್ಲಿ ಮಿಂದೆದ್ದ ಚಿಂಚೋಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನಲ್ಲಿ ಸೋಮವಾರ ಭಾರಿ ಮಂಜು ಕವಿದು ರಸ್ತೆಗಳು, ಗಿಡಮರಗಳು, ಪಕ್ಷಿಗಳು ಮತ್ತು ಕಟ್ಟಡಗಳು ಕಾಣದಂತಾಗಿದೆ. ಬೆಳಿಗ್ಗೆ ವಾಯುವಿಹಾರಕ್ಕೆ ತೆರಳುವವರು ಮೊಬೈಲ್ ಟಾರ್ಚ್ ಹಾಕಿಕೊಂಡು ವಿಹಾರಕ್ಕೆ ತೆರಳಿದರೆ, ಬೈಕ್ ಸೇರಿದಂತೆ ವಾಹನ ಸವಾರರು ಹೆಡ್ ಲೈಟ್ ಹಾಕಿಕೊಂಡು ಸಂಚರಿಸುತ್ತಿರುವುದು ಗೋಚರಿಸಿತು.

ಹಾಲು ಮಾರಾಟಗಾರರು, ಪತ್ರಿಕೆ ವಿತರಕರು ಕೂಡ ಮಂಜಿನ ಮುಸುಕಿನಲ್ಲಿ ಸಂಚರಿಸಿ ತಮ್ಮ ಕಾಯಕ ನಿರ್ವಹಿಸಿದರು. 

'ಸದ್ಯ ಇದರಿಂದ ಯಾವುದೇ ಆಪತ್ತು ಇಲ್ಲ. ಆದರೆ ತೊಗರಿ ಹೂವಾಡುವ ವೇಳೆಗೆ ಮಂಜು ಬಡಿದರೆ ಹೂ ಉದುರುವ ಸಾಧ್ಯತೆ ಹೆಚ್ಚು' ಎಂದು ಕೃಷಿ ಇಲಾಖೆಯ  ಸಹಾಯಕ‌ ನಿರ್ದೇಶಕ ಅನಿಲಕುಮಾರ ರಾಠೋಡ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು