ಮಾಶಾಳದ ರೈತರಾದ ಸಂತೋಷ ಗಂಜಿ, ಚಂದ್ರಶೇಖರ್ ಕರ್ಜಿಗಿ ಮತ್ತು ಚಂದ್ರರಾಮ ಬಳಗೊಂಡೆ ಮಳೆ ಬಗ್ಗೆ ಮಾಹಿತಿ ನೀಡಿ, ‘ಮಳೆಗಾಲ ಆರಂಭವಾಗಿ ಮೂರು ತಿಂಗಳು ಕಳೆಯುತ್ತಾ ಬಂದರೂ ಇನ್ನೂ ಹಳ್ಳ, ಕೊಳ್ಳಗಳು ಮತ್ತು ಕೃಷಿ ಹೊಂಡಗಳು ತುಂಬಿಕೊಂಡಿಲ್ಲ. ಇದರಿಂದ ತೆರೆದಬಾವಿ ಮತ್ತು ಕೊಳವೆ ಬಾವಿಗೆ ನೀರು ಬಂದಿಲ್ಲ’ ಎಂದು ತಿಳಿಸಿದರು.