ಶನಿವಾರ, ಜುಲೈ 24, 2021
28 °C

ಕೆರೆ ಭರ್ತಿಯಾಗಿ ಹೊಲಕ್ಕೆ ನುಗ್ಗಿದ ನೀರು; ಗೋಡೆ ಕುಸಿದು 3 ಆಕಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಲಬುರ್ಗಿ: ಜಿಲ್ಲೆಯ ಕಮಲಾಪುರ ತಾಲ್ಲೂಕಿನ ‌ಬಾಚನಾಳ ಕೆರೆ ಭರ್ತಿಯಾಗಿ ಪಕ್ಕದ ಹೊಲ‌ಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. 

ಕಮಲಾಪುರ ತಾಲ್ಲೂಕಿನ ಸೊಂತ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಮೂರು ಆಕಳುಗಳು ಸಾವನ್ನಪ್ಪಿವೆ.

ಕುದಮುಡ ಸೇತುವೆ ಕುಸಿದಿದೆ. ಗೊಬ್ಬರವಾಡಿಯಲ್ಲಿ ಹಳ್ಳ ತುಂಬಿ ಹೊಲಗಳಿಗೆ ಹರಿಯುತ್ತಿದೆ.

ಇತ್ತೀಚಿನ ‌ದಿನಗಳಲ್ಲಿ ಸುರಿಯುತ್ತಿರುವ ಅತ್ಯಂತ ಬಿರುಸಿನ ಮಳೆ ಇದಾಗಿದೆ. ಕಲಬುರ್ಗಿಯಲ್ಲಿ ಬೆಳಿಗ್ಗೆಯಿಂದಲೇ ಮೋಡದ ಮುಸುಕು ಹೊದ್ದುಕೊಂಡಿದ್ದು, ಮಧ್ಯಾಹ್ನದ ಬಳಿಕ ನಿರಂತರವಾಗಿ ಮಳೆ ಸುರಿಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು