ಗುರುವಾರ , ಆಗಸ್ಟ್ 22, 2019
23 °C

ಕಲಬುರ್ಗಿ: ಭೀಮಾ ನದಿಗೆ 2.25 ಲಕ್ಷ ಕ್ಯುಸೆಕ್ ನೀರು

Published:
Updated:

ಕಲಬುರ್ಗಿ: ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಹಾಗೂ ವೀರಾ ಅಣೆಕಟ್ಟೆಯಿಂದ ಒಟ್ಟು 2.25 ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗಿದ್ದು, ನೀರು ಪ್ರಸ್ತುತ ‌ಪಂಢರಾಪುರ ತಲುಪಿದೆ. ರಾತ್ರಿ ವೇಳೆಗೆ ಕಲಬುರ್ಗಿ ಜಿಲ್ಲೆಯ ‌ಗಡಿ ತಲುಪಲಿದೆ.

ಈಗಾಗಲೇ ಅಫಜಲಪುರ ತಾಲ್ಲೂಕಿನ ಸೊನ್ನ ಬ್ಯಾರೇಜಿನಲ್ಲಿ‌ 2 ಟಿಎಂಸಿ ಅಡಿ ನೀರು ‌ಸಂಗ್ರಹವಾಗಿದೆ. ಇದರ ಸಂಗ್ರಹ ಸಾಮರ್ಥ್ಯ 3.16 ಟಿಎಂಸಿ ಅಡಿ. ಹೆಚ್ಚುವರಿ ‌ನೀರು ತಲುಪುತ್ತಿದ್ದಂತೆಯೇ ಬ್ಯಾರೇಜಿನಿಂದ ನೀರು ಬಿಡುಗಡೆ ‌ಮಾಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಭೀಮಾ ಏತ ನೀರಾವರಿ ‌ಯೋಜನೆ ಅಫಜಲಪುರ ಉಪವಿಭಾಗದ ಕಾರ್ಯನಿರ್ವಾಹಕ ‌ಎಂಜಿನಿಯರ್ ಮಲ್ಲಿಕಾರ್ಜುನ ‌ಮಾಕಾ ತಿಳಿಸಿದ್ದಾರೆ

Post Comments (+)