ಚಿಂಚೋಳಿ: ತಾಲ್ಲೂಕಿನಲ್ಲಿ ಶುಕ್ರವಾರ ಧಾರಾಕಾರ ಮಳೆ ಸುರಿದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮುಂಗಾರಿನ ಅಲ್ಪಾವಧಿ ಬೆಳೆಗಳು ಭರವಸೆ ಮೂಡಿಸಿವೆ.

ಸಂಜೆ 4.30ಕ್ಕೆ ಪ್ರಾರಂಭವಾದ ಮಳೆ ಎರಡು ಗಂಟೆ ಜೋರು ಸುರಿಯಿತು. ಚಿಂಚೋಳಿ, ಚಂದಾಪುರ, ದಸ್ತಾಪುರ, ಐನೋಳ್ಳಿ, ದೇಗಲಮಡಿ, ಐನಾಪುರ, ಸಾಲೇಬೀರನಹಳ್ಳಿ, ಕುಂಚಾವರಂ, ಶಾದಿಪುರ, ನಿಡಗುಂದಾ ಮೊದಲಾದ ಕಡೆ ಮಳೆಯಾಗಿದ್ದು, ಮುಂಗಾರಿನ ಬೆಳೆಗಳಿಗೆ ವರದಾನವಾಗಿದೆ. ಮಳೆಯಿಂದ ಹಳ್ಳ ಕೊಳ್ಳಗಳು ಮೈದುಂಬಿ ಹರಿದವು.

ನೀರು ಹೊರಕ್ಕೆ: ಮಳೆಯಿಂದ ನಾಗರಾಳ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, 730 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ಜಲಾಶಯದ ಒಂದು ಗೇಟು ಒಂದು ಅಡಿಯಷ್ಟು ಎತ್ತಿ ನೀರು ಬಿಡಲಾಗಿದ್ದು, ನದಿ ಪಾತ್ರದ ಗ್ರಾಮಗಳ ಜನರು ಎಚ್ಚರಿಕೆ ವಹಿಸಲು ಎಇಇ ಅಮೃತ ಪವಾರ ಹಾಗೂ ಎಇ ವಿನಾಯಕ ಚವ್ಹಾಣ ತಿಳಿಸಿದ್ದಾರೆ. ಒಳ ಹರಿವು 280 ಕ್ಯೂಸೆಕ್ ಇದ್ದು ಜಲಾಶಯದ ನೀರಿನ 489.70 ಮೀಟರ ಇದೆ ಎಂದು ಮಾಹಿತಿ ನೀಡಿದ್ದಾರೆ.

ಮನೆಗಳಿಗೆ ನುಗ್ಗಿದ ನೀರು: ತಾಲ್ಲೂಕಿನ ಪೋಲಕಪಳ್ಳಿಯಲ್ಲಿ ಹತ್ತಾರು ಮನೆಗಳಿಗೆ ನೀರು ನುಗ್ಗಿದೆ. ಭಾರಿ ಮಳೆಯಿಂದ ರಸ್ತೆಯೇ ನದಿಯಂತೆ ನೀರು ತುಂಬಿ ಹರಿದಿದೆ ಎಂದು ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.