ಬುಧವಾರ, ಜುಲೈ 28, 2021
28 °C

ಕಲಬುರ್ಗಿ ‌ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಜಿಲ್ಲೆಯ ಸೇಡಂ, ಚಿತ್ತಾಪುರ, ಕಾಳಗಿ ತಾಲ್ಲೂಕಿನ ಹಲವೆಡೆ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿದೆ.

ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ, ಮಾಡಬೂಳ, ಸೇಡಂ  ಪಟ್ಟಣ‌ ಸೇರಿದಂತೆ ತಾಲ್ಲೂಕಿನ ಮಳಖೇಡ, ಹೂಡಾ (ಬಿ), ಸಂಗಾವಿಯಲ್ಲಿ ಸುಮಾರು ಅರ್ಧಗಂಟೆಯಿಂದ ಮಳೆ ಸುರಿಯತ್ತಿದೆ.

ಕಳೆದ ವಾರದಿಂದ ಸುರಿಯುತ್ತಿರುವ ಭಾರಿ ‌ಮಳೆಯಿಂದಾಗಿ ಕಾಗಿಣಾ ಮತ್ತು ಕಮಲಾವತಿ ನದಿಗಳಲ್ಲಿ ‌ನೀರಿನ ಮಟ್ಟ‌ ಹೆಚ್ಚಾಗಿದೆ.

ಕಾಗಿಣಾದಲ್ಲಿ ಪ್ರವಾಹ ‌ಉಂಟಾಗಿರುವುದರಿಂದ ಶುಕ್ರವಾರ ‌ನೀರು ಪಾಲಾದ‌ ಸೇಡಂ ತಾಲ್ಲೂಕಿನ ಸಂಗಾವಿ (ಎಂ) ಗ್ರಾಮದ ‌ಮಾಣಿಕವ್ವ (28) ಅವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಭಾನುವಾರವೂ ಕಾರ್ಯಾಚರಣೆ ಮುಂದುವರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು