ಶನಿವಾರ, ಮೇ 21, 2022
26 °C

ಎಚ್‌ಕೆಸಿಸಿಐಗೆ ವಿಜಯೇಂದ್ರ ಸಂಬಂಧಿ ಪ್ರಶಾಂತ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಇಲ್ಲಿನ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ)ಯ ಅಧ್ಯಕ್ಷರಾಗಿ ನಗರದ ಉದ್ಯಮಿ ಪ್ರಶಾಂತ ಮಾನಕರ ಗೆಲುವು ಸಾಧಿಸಿದ್ದಾರೆ. ಇವರು, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಭಾವ. 

ಭಾನುವಾರ ನಗರದಲ್ಲಿ ಮತದಾನ ನಡೆದು, ತಡರಾತ್ರಿ ಫಲಿತಾಂಶ ಪ್ರಕಟವಾಯಿತು.

ಪ್ರಶಾಂತ (1,524 ಪಡೆದ ಮತ) ಅವರು ನಿಕಟಪೂರ್ವ ಅಧ್ಯಕ್ಷ ಅಮರನಾಥ ಸಿ. ಪಾಟೀಲ ಅವರನ್ನು 878 ಮತಗಳಿಂದ ಪರಾಭವಗೊಳಿಸಿದರು. 

ಪ್ರಶಾಂತ ಅವರ ಬಣದ ಎಲ್ಲ 23 ಸ್ಪರ್ಧಿಗಳು ವಿಜೇತರಾಗಿದ್ದಾರೆ. ನೂತನ ಆಡಳಿತ ಮಂಡಳಿಯ ಅವಧಿ ಮೂರು ವರ್ಷ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು